ಕುಮಟಾ: ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆಯಾದ ಹಿನ್ನಲೆಯಲ್ಲಿ ಕುಮಟಾದ ಬಿಜೆಪಿಯ ಕುಮಟಾ ಮಂಡಲದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿಯ ಸ್ಥಾಪನಾ ದಿನಾಚರಣೆಯಂದು ಬಿಜೆಪಿಯ ಬೂತ್ ಅಧ್ಯಕ್ಷರ ಮನೆಯ ಮೇಲೆ ದ್ವಜಾರೋಹಣ ಪಟ್ಟಣದ ಮಹಾಸತಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಸ್ತಿ ಕಟ್ಟೆಯಿಂದ ಬಿಜೆಪಿಯ ಕಛೇರಿಯವರೆಗೆ ಪಾದಯಾತ್ರೆ ನಡೆಯಿತು.
ನಂತರ ಬಿಜೆಪಿಯ ಕಾರ್ಯಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲೈವ್ ಭಾಷಣ ವಿಕ್ಷಣೆ, ಜನ ಸಂಘದ ಹಿರಿಯ ಕಾರ್ಯಕರ್ತರಾದ ಶೇಷಗೀರಿ ಶಾನಭಾಗ, ಸತ್ಯನಾರಾಯಣ ಭಟ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಜೋತೆ ಹಿಂದೂ ರಾಷ್ಟವಾಗಿ ಪರಿವರ್ತಿಸುವ ಅನಿವಾರ್ಯತೆ ಇದೆ, ಕೆವಲ ಅಧಿಕಾರಕ್ಕಾಗಿ ಕಿತ್ತಾಡುವುದನ್ನು ನಿಲ್ಲಿಸಬೇಕಿದೆ.ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಭಾರತೀಯ ಜನತಾ ಪಕ್ಷದ ಧ್ಯೇಯ ವಾಕ್ಯವನ್ನು ಅನುಸರಿಸಿಕೊಂಡು ಮುನ್ನಡೆಯ ಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಗಜು ಪೈ, ಬಿಜೆಪಿಯ ತಾಲೂಕಾದ್ಯಕ್ಷರಾದ ಹೇಮಂತ ಕುಮಾರ ಗಾಂವ್ಕರ್, ಪುರಸಭಾ ಮಾಜಿ ಅಧ್ಯಕ್ಷರಾದ ಮೋಹಿನಿ ಗೌಡ, ಮುಖಂಡರಾದ ನಾಗರಾಜ ನಾಯಕ್ ತೋರ್ಕೆ, ದೇವಗಿರಿ ಗ್ರಾ.ಪಂ ಉಪಾಧ್ಯಕ್ಷರಾದ ಎಸ್.ಟಿ.ನಾಯ್ಕ ಇತರಿದ್ದರು.