Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಏ.26ಕ್ಕೆ ತಾಲೂಕಾ ಮಟ್ಟದ ಆರೋಗ್ಯ ಮೇಳ

ಕುಮಟಾ:75ನೇ ವರ್ಷದ ಸ್ವಾತಂತ್ರೋತ್ಸವ ಅಮೃತಮಹೋತ್ಸವದ ಅಂಗವಾಗಿ ತಾಲೂಕಾ ಮಟ್ಟದ ಆರೋಗ್ಯ ಮೇಳ ದಿ:26-04-2022 ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ: ಆಜ್ಞಾ ನಾಯ್ಕ ಅವರು ಹೆಳದರು.

ಈ ಮೇಳದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಿಡಲಾಗುವದು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ. ಪಿ ಎಂ ಜೆ ಏ ವೈ ಡಿಜಿಟಲ್ ಐಡಿ ಕಾರ್ಡ್ ನೋಂದಣಿ ಮಾಡಲಾಗುತ್ತದೆ ಸಕ್ಕರೆ ಕಾಯಿಲೆ ರಕ್ತದೊತ್ತಡ ಕ್ಯಾನ್ಸರ್ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೇತ್ರಾದಾನ ನೋಂದಣಿ ಕುರಿತು ಮಾಹಿತಿ ಮತ್ತು ಆರೋಗ್ಯ ಸೇವೆಗಳ ಜಾಗೃತಿ ಉಚಿತ ಪ್ರಯೋಗಾಲಯ ಮತ್ತು ಔಷಧಿ ವಿತರಣೆ ಶ್ರವಣದೋಷ ಹಾಗೂ ಕಣ್ಣಿನ ತಪಾಸಣೆ  ಆರೋಗ್ಯ ಶಿಕ್ಷಣ ಆಹಾರ ಸಮಾಲೋಚನೆ ಮತ್ತು ಪೌಷ್ಟಿಕ ಪ್ರಾ ತ್ಯಕ್ಷಿಕೆ ಆಹಾರ ಕಲಬೆರಕೆ ಪರೀಕ್ಷೆ ಮತ್ತು ಜಾಗೃತಿ ಸಾಂಕ್ರಾಮಿಕ ರೋಗ ಮತ್ತು ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಔಷಧ ವಿತರಣೆ ಕ್ಷಯರೋಗ ಎಚ್ಐವಿ ಹಾಗೂ ಜನನಾಂಗ ಸೋಂಕುಗಳ ತಪಾಸಣೆ ಮತ್ತು ಆಪ್ತ ಸಮಾಲೋಚನೆ ಹದಿಹರೆಯದವರಿಗೆ ಜೀವನ ಕೌಶಲ್ಯ ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ ಧೂಮಪಾನ ಮತ್ತು ತಂಬಾಕು ಸೇವನೆಯ ವಿರುದ್ಧ ಜಾಗೃತಿ ಮತ್ತು ಆಪ್ತಸಮಾಲೋಚನೆ ಕುಟುಂಬ ಕಲ್ಯಾಣ  ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಆಪ್ತಸಮಾಲೋಚನೆ ತಾಯಿ ಮಕ್ಕಳ ಆರೋಗ್ಯ ಕುರಿತು ಮಾಹಿತಿ ಮತ್ತು ಕೋವಿಡ್ ಲಸಿಕೆ ಕುರಿತು ಅರಿವು ಕಾರ್ಯ ಮಾಡುವುದು ಇವೆಲ್ಲದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಕಡ್ಡಾಯವಾಗಿ ಆಧಾರ ಕಾರ್ಡ್ ಹಾಗೂ ರೇಷನ್ ಕಾರ್ಡ್ ತರಬೇಕು  ಎಂದು ಹೇಳಿದರು