Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಯುಗಾದಿ ಉತ್ಸವದ ಸಮಿತಿಯಿಂದ ಕುಮಟಾ ಪಟ್ಟಣದಲ್ಲಿ ಭೈಕ್ ರ‍್ಯಾಲಿ

ಕುಮಟಾ: ಯುಗಾದಿ ಉತ್ಸವದ ನಿಮಿತ್ತ ಯುಗಾದಿ ಉತ್ಸವ ಸಮಿತಿ ಹಮ್ಮಿಕೊಂಡ ಬೃಹತ್ ಬೈಕ್ ರ‍್ಯಾಲಿಗೆ ಶಾಸಕ ದಿನಕರ ಶೆಟ್ಟಿ, ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಡಾ.ಸುರೇಶ ಭಟ್ ಮತ್ತಿತರರ ಹಿಂದೂ ಸಂಘಟನೆಯ ಮುಖಂಡರು ಚಾಲನೆ ನೀಡಿದರು.ಪಟ್ಟಣದ ದೇವರಹಕ್ಕಲಿನ ಶಾಂತಿಕಾ ಪರಮೇಶ್ವರಿ ದೇವಾಲಯದ ಆವಾರದಲ್ಲಿ ಪ್ರಾರಂಭಗೊಂಡ ಭೈಕ್ ರ‍್ಯಾಲಿ ಪಟ್ಟಣದಾದ್ಯಂತ ಸಂಚರಿಸಿತು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಿಂದೂ ರಾಷ್ಟದ ಸಂಸ್ಕ್ರತಿ ಮತ್ತು ಹಿಂದೂ ರಾಷ್ಟದ ನಿರ್ಮಾಣಕ್ಕೆ ನಾವೆಲ್ಲರೂ ಒಗ್ಗೂಡಬೇಕಿದ್ದು ಬಹಳ ಯಶಸ್ವಿಯಾಗಿ ಬೈಕ್ ರ‍್ಯಾಲಿ ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಕಾರಣಕ್ಕೆ ಸಮಸ್ತ ಹಿಂದೂ ಭಾಂದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಯಗಾದಿ ಉತ್ಸವ ಸಮಿತಿ ಅಧ್ಯಕ್ಷ ಡಾ ಸುರೇಶ ಭಟ್ ಮಾತನಾಡಿ ಕಳೆದ ೧೩ ವರ್ಷಗಳಿಂದ ಯುಗಾದಿ ಉತ್ಸವವನ್ನು ಕುಮಟಾದಲ್ಲಿ ಆಯೋಜಿಸುತ್ತಿದ್ದೇವೆ, ಭಾರತಕ್ಕೆ ಶಕ್ತಿ ನಿಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮದಿಂದ ಎಲ್ಲಾ ಹಿಂದೂಗಳು ಸಂಘಟನೆಯಾಗುತ್ತಿದ್ದಾರೆ ಎಂದು ಹೇಳಿದರು.

ಭೈಕ್ ರ‍್ಯಾಲಿಯಲ್ಲಿ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ರಸ್ತೆಯುದ್ದಕ್ಕೂ ಜೈ ಶ್ರೀರಾಮ ಘೋಷಣೆ ಕೂಗಿದರು.ಈ ವೇಳೆ ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸುಭ್ರಾಯ ನಾಯ್ಕ, ಕೋಶಾಧ್ಯಕ್ಷ ಜಿ.ಎಸ್.ಹೆಗಡೆ ಸಮಿತಿಯ ಕಾರ್ಯದರ್ಶಿ ಆನಂದು ನಾಯಕ,ಪ್ರೋ ಎಂ.ಜಿ.ಭಟ್, ಡಾ.ಜಿ.ಜಿ.ಹೆಗಡೆ ಮೋಹಿನಿ ಗೌಡ ಸೇರಿದಂತೆ ಇನ್ನಿತರ ಪ್ರಮುಖರಿದ್ದರು.