ಕುಮಟಾ:ಭಾರತೀಯ ಸೇನೆಯಲ್ಲಿ ಸತತ 17 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ಈಗ ನಿವೃತ್ತಿ ಹೊಂದಿ ಹುಟ್ಟಿದ ಊರಿಗೆ ಆಗಮಿಸಿದ ಯೋಧನಿಗೆ ಆತ್ಮೀಯವಾಗಿ,ಬರಮಾಡಿಕೊಳ್ಳಲಾಯಿತು.
ನಂತರ ಮಾತನಾಡಿದ ಯೋಧ ರಾಜೇಂದ್ರ ನಾಯ್ಕ ಮಾತನಾಡಿ 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ನನ್ನನ್ನು ಜಾತ್ಯಾತೀತವಾಗಿ ಎಲ್ಲರೂ ಒಗ್ಗೂಡಿ ಸ್ವಾಗತಿಸಿರುವುದು ಬಹಳ ಸಂತೋಷವನ್ನು ಉಂಟುಮಾಡಿದೆ, ನಮ್ಮ ತಾಲೂಕಿನ ಜನತೆಗೆ ಇರುವ ದೇಶ ಪ್ರೇಮ ಎಂತದ್ದು ಎನ್ನುವುದು ಇದರಿಂದ ತಿಳಿಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಮುಂದಿನ ದಿನ ಹೆಚ್ಚು ಹೆಚ್ಚು ಯುವಕರು ದೇಶ ಸೇವೆಗಾಗಿ ಸೈನ್ಯಕ್ಕೆ ಸೇರುವಂತಾಗಬೇಕು ನಿವೃತ್ತಿ ಹೊಂದಿದ ಯೋಧ ರಾಜೇಂದ್ರ ಅವರ ನಿವೃತ್ತಿ ಜೀವನ ಸುಖವಾಗಿರಲಿ ಎಂದು ಶುಭಹಾರೈಸಿದರು.
ನಂತರ ತೆರದ ವಾಹನದಲ್ಲಿ ಕುಮಟಾದ iಹಾಸತಿ ಕಟ್ಟೆಯಿಂದ ದಿವಗಿಯ ವರೆಗೆ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಬ್ರೀಗೆಡ್ ಅಣ್ಣಪ್ಪ, ಕಾಂಗ್ರೇಸ್ ಮುಖಂಡರಾದ ಹೊನ್ನಪ್ಪ ನಾಯಕ, ವಕೀಲರಾದ ಆರ್,ಜಿ,ನಾಯ್ಕ ಸೇರಿದಂತೆ ಇತರರಿದ್ದರು.