ಕುಮಟಾ: ಅಂಭೇಡ್ಕರ್ ಅವರ 131ನೇ ಜನ್ಮ ದಿನದ ಅಂಗವಾಗಿ ಕರೋನಾ ವಾರಿಯರ‍್ಸ್‌ಗಳಾಗಿ ಕರ್ತವ್ಯ ನಿರ್ವಹಿಸಿದ ಕುಮಟಾದ ತಾಲೂಕಿನ ಸರಕಾರಿ ಆಸ್ಪತ್ರೆಯ ವೈಧ್ಯರಿಗೆ ಆರೋಗ್ಯ ಸಿಬ್ಬಂದಿಗಳಿಗೆ ಶಾಸಕರಾದ ದಿನಕರ ಶೆಟ್ಟಿಯವರಿಂದ ನೆನಪಿನ ಕಾಣಿಕೆ ವಿತರಣಾ ಕಾರ್ಯಕ್ರಮವನ್ನು ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಭೇಡ್ಕರ್ ಅವರ 131 ನೇ ಜನ್ಮ ದಿನವಾಗಿದ್ದು ಇದೆ ದಿನದಂದು, ಜೈನ್ ತೀರ್ಥಂಕರ ಮಹಾವೀರ ಜನ್ಮ ದಿನವು ಕೂಡಾ ದೇಶದೆಲ್ಲಡೆ ಆಚರಿಸುತ್ತಿದ್ದೇವೆ.
ಈ ಇಬ್ಬರು ಮಹಾನ್ ವ್ಯಕ್ತಿಗಳ ದಿನದ ಶುಭ ಸಂಧರ್ಭದಲ್ಲಿ ನಮ್ಮ ಪಕ್ಷದ ವತಿಯಿಂದ ಕರೋನಾ ವಾರಿಯರ‍್ಸ್‌ಗಳಿಗೆ ನೆನಪಿನ ಕಾಣಿಕೆಯನ್ನು ನೀಡಬೇಕೆಂದು ತಿರ್ಮಾನಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕರೋನಾ ಬಂದ ವೇಳೆಯಲ್ಲಿ ಕುಮಟಾದ ಎಲ್ಲಾ ಸರಕಾರಿ ಆಸ್ಪತ್ರೆಯ ವೈಧ್ಯರು ಸಿಬ್ಬಂದಿಗಳು ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ವ್ಯಾಕ್ಸಿನ್ ನೀಡುವ ಸಂದರ್ಭದಲ್ಲೂ ಬಹಳ ಮುತುವರ್ಜಿ ವಹಿಸಿ ಲಸಿಕೆ ನೀಡುವ ಕಾರ್ಯ ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ. ವೈಧ್ಯರ ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆಯನ್ನು ಮನಗಂಡು ಇಂದು ನೆನಪಿನ ಕಾಣಿಕೆ ನೀಡಿದ್ದೇವೆ ಎಂದರು. ಇದೆ ವೇಳೆ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಗಣೇಶ ನಾಯ್ಕ, ಬಿಜೆಪಿಯ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಬಿಜೆಪಿಯ ಮಂಡಲಾಧ್ಯಕ್ಷರಾದ ಹೆಮಂತ ಗಾಂವ್ಕರ್, ಪುರಸಭಾ ಅಧ್ಯಕ್ಷರಾದ ಅನುರಾಧ ಬಾಳೇರಿ, ಬಿಜೆಪಿಯ ಗಜಾನನ ಗುನಗಾ ಸೇರಿದಂತೆ ಇತರಿದ್ದರು.