ಶಿರಸಿ: ತಾಲ್ಲೂಕಿನ ನರೂರ ಗ್ರಾಮದ ವೀರಭದ್ರೇಶ್ವರ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ಇಂದು ನಡೆದ ಗುಗ್ಗಳ ಉತ್ಸವದ ವೇಳೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕೆಂಡ ಹಾಯ್ದರು.ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಉತ್ಸವದ ವೇಳೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಕಟ್ಟಿಕೊಂಡವರು ಈಡೇರಿದ ಮೇಲೆ ಕೆಂಡ ಹಾಯುವ ಪದ್ಧತಿ ನಡೆಸಿಕೊಂಡು ಬರಲಾಗುತ್ತಿದೆ.
ಶ್ರೀ ವೀರ ಭದ್ರೇಶ್ವರ ಹಾಗೂ ಶ್ರೀ ನಾಗಚೌಡೇಶ್ವರಿ ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೆರಳಿದ್ದ ಸಚಿವ ಹೆಬ್ಬಾರ್ ಭಕ್ತರ ಜತೆಗೆ ತಾವೂ ಕೂಡ ಕೆಂಡ ಹಾಯ್ದಿದ್ದಾರೆ.
ಹೆಬ್ಬಾರರು ಕೂಡ ಹಿಂದೆ ಶ್ರೀ ವೀರಭದ್ರ ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದು ಅದು ನೆರವೇರಿರುವುದರಿಂದ
ಅವರು ಸಹ ಕೆಂಡಹಾಯ್ದಿದ್ದಾರೆ , ಹಿಂದೆ ಇದ್ದ ಸಂಕಷ್ಟಗಳು ನಿವಾರಣೆಯಾಗಿದೆ. ಈ ದೇವರಿಗೆ ಅವರು ನಡೆದುಕೊಳ್ಳುತ್ತಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ. ಆದರೇ ಕುದ್ದು ಸಚಿವರ ಆಪ್ತಕಾರ್ಯದರ್ಶಿ ಕಮಲಾಕರ್ ರವರು ಇದನ್ನು ನಿರಾಕರಿಸಿದ್ದು ,ಕಾರ್ಯಕ್ರಮಕ್ಕೆ ಭಾಗವಹಿಸಿದ್ದರಿಂದ ಕೆಂಡ ಹಾಯ್ದಿದ್ದಾರೆ. ಹರಕೆ ಏನೂ ಕಟ್ಟಿಕೊಂಡಿಲ್ಲ ಎಂದು ತಿಳಿಸಿದ್ದಾರೆ.