Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ನಾಮಧಾರಿ ಸಂಘ ಕುಮಟಾದ ನೂತನ ಪದಾಧಿಕಾರಿಗಳ ಆಯ್ಕೆ

ಕುಮಟಾ: ನಾಮಧಾರಿ ಸಂಘ ನೂತನ ಅಧ್ಯಕ್ಷರಾಗಿ ಮಂಜುನಾಥ ನಾಯ್ಕ (ಕೋಡ್ಕಣಿ), ಆಯ್ಕೆಯಾದರು. ಪಟ್ಟಣದ ಬಗ್ಗೋಣ ರಸ್ತೆಯಲ್ಲಿರುವ ಆರ್ಯ, ಈಡಿಗ, ನಾಮಧಾರಿ ಸಂಘದ ಮುಂದಿನ ಮೂರು ವರ್ಷದ ಆಡಳಿತಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.  ಉಪಾಧ್ಯಕ್ಷರಾಗಿ ಅರುಣ್ ನಾಯ್ಕ (ತದಡಿ), ಕಾರ್ಯದರ್ಶಿಯಾಗಿ ರಾಘವೇಂದ್ರ ನಾಯ್ಕ (ಉಪ್ಪಾರಕೇರಿ), ಸಹ ಕಾರ್ಯದರ್ಶಿಯಾಗಿ ಸರ್ವೇಶ್ವರ ನಾಯ್ಕ (ಹೆರವಟ್ಟಾ), ಕೋಶಾಧ್ಯಕ್ಷರಾಗಿ ಕಮಲಾಕರ ನಾಯ್ಕ (ಕಲಭಾಗ್) ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ನಾಯ್ಕ (ದೇವರಹಕ್ಕಲ್) ಇವರು ಆಯ್ಕೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಮಂಜುನಾಥ ನಾಯ್ಕ, “ಹಿರಿಯರ ಮಾರ್ಗದರ್ಶನಲ್ಲಿ ಸಮಾಜದ ಎಲ್ಲ ಸ್ಥರದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು” ಎಂದು ಭರವಸೆ ನೀಡಿದರು.

ಕುಮಟಾದ ಬೇರೆ ಬೇರೆ ಭಾಗದಿಂದ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಎಲ್ಲ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದು, ಒಮ್ಮತದಿಂದ ಎಲ್ಲ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.