Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ. ಉದಾಸೀನತೆ ತೋರಿದ ಸಿಬ್ಬಂದಿಗಳಿಗೆ ತರಾಟೆ

ಹೊನ್ನಾವರ: ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. 
ಪ್ರತಿಯೊಬ್ಬರ ದಿನಚರಿಯನ್ನು ಪ್ರಶ್ನಿಸಿದ ಅವರು ಶುಕ್ರವಾರ ಇಡೀ ದಿನ ಮಾಡಿದ ಕೆಲಸಗಳ ಬಗ್ಗೆ ವಿಚಾರಣೆ ನಡೆಸಿದರು. ಕಚೇರಿ ಕೆಲಸ ಕಾರ್ಯಗಳು ನಿಧಾನಗತಿಯಿಂದ ಸಾಗುತ್ತಿದ್ದು, ಈ ವಿಳಂಬದಿಂದ ಸಾರ್ವಜನಿಕರು ಪರದಾಡುತ್ತಿರುವುದನ್ನು ಗಮನಿಸಿದ ಅವರು ವಿವಿಧ ವಿಭಾಗಗಳ ಫೈಲ್ ಗಳನ್ನು ತೆಗೆಸಿ ಪರಿಶೀಲಿಸಿದರು. ಕೆಲವು ಸಿಬ್ಬಂದಿಗಳ ಗೈರಿನ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಕಚೇರಿಯಲ್ಲಿ ಉದಾಸೀನತೆಗೆ ಅವಕಾಶವಿಲ್ಲ. ಯಾವ ಕೆಲಸವನ್ನೂ ಅನಾವಶ್ಯಕ ಬಾಕಿ ಉಳಿಸುವಂತಿಲ್ಲ. ಕೆಲಸದ ಅವಧಿಯನ್ನು ನಿರಾಯಾಸವಾಗಿ ಕಳೆದು ಜನರಿಗೆ ಸಮಸ್ಯೆಯೊಡ್ಡಿ, ಸರ್ಕಾರಕ್ಕೂ ಹೊರೆ ಆಗುವಂಥ ಸಿಬ್ಬಂದಿ ನಮಗೆ ಅವಶ್ಯಕತೆಯಿಲ್ಲ. ಗಮನಕ್ಕೆ ಬಂದರೆ ಕೆಲಸ ಕಳೆದುಕೊಳ್ಳಬೇಕಾಗಬಹುದು ಎಂದೂ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು.