ಕುಮಟಾ: ಮಂಜುನಾಥ ಶಿವಾನಂದ ಹರಿಕಂತ್ರ ಎನ್ನುವ 32 ವರ್ಷದ ಯುವಕ ಎಂಡೋಸಲ್ಫಾನ್ ಪೀಡಿತ ಕಾಯಿಲೆಗೆ ತುತ್ತಾಗಿದ್ದು ಯುವಕನಿಗೆ ಶಾಶ್ವತ ಅಂಗವೈಕಲ್ಯತೆಯ ಪ್ರಮಾಣ ಪತ್ರ ನೀಡುವಂತೆ ಕಾಂಗ್ರೆಸ್ ಮುಖಂಡರಾದ ಆರ್.ಎಚ್.ನಾಯ್ಕ ಮನವಿ ಸಲ್ಲಿಸಲಾಯಿತು.
ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗಳು ಹಾಗೂ ವೈಧ್ಯರಾದ ಡಾ.ಗಣೇಶ ನಾಯ್ಕ ಅವರಿಗೆ ಶಾಶ್ವತ ಅಂಗವೈಕಲ್ಯತೆಯ ಪ್ರಮಾಣ ಪತ್ರ ನೀಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ವಂದಿಸಿದ ಆಸ್ಪತ್ರೆಯ ವೈಧ್ಯರಾದ ಗಣೇಶ ಹಾಗೂ ವೈಧ್ಯರಾದ ಶ್ರೀನಿವಾಸ ನಾಯಕ ಅವರು ಶೀಘ್ರದಲ್ಲೆ ಅಂಗವೈಕಲ್ಯ ಶಾಶ್ವತ ಪ್ರಮಾಣ ಪತ್ರ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಆರ್.ಎಚ್.ನಾಯ್ಕ ಮೀನುಗಾರಿಕೆ ಮಾಡಿ ಜೀವನ ರೂಪಿಸುವ ಬಡಕುಟುಂಬವು, ಮಗನ ಚಿಕಿತ್ಸೆಗೆ 2016ರಿಂದ ಇಲ್ಲಿಯ ತನಕ 20 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ರೆ. ಮಗನ ಸಮಸ್ಯೆಗೆ ಹಲವಾರು ಜನಪ್ರತಿನಿಧಿಗಳಲ್ಲಿ, ಅಧಿಕಾರಿಗಳಲ್ಲಿ ಪರಿಹಾರಕ್ಕೆ ಮನವಿ ಮಾಡಿಕೊಂಡರೂ ಪಾಲಕರಿಗೆ ಯಾರೂ ಕೂಡಾ ಅಷ್ಟಾಗಿ ಸ್ವಂದಿಸಿಲ್ಲ. ನಾನು ಕಾಂಗ್ರೇಸ್ ಸದಸ್ಯತ್ವದ ನೊಂದಣಿಗೆ ಮನೆ ಮನೆಗೆ ತೆರಳಿಗಾದ ಎಂಡೋಸಲ್ಫಾನ್ ಪೀಡಿತ ಯುವಕನ ತಂದೆ ತಾಯಿ ನನ್ನ ಗಮನಕ್ಕೆ ತಂದರೂ ನಾನು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಾಶ್ವತ ಅಂಗವೈಕಲ್ಯತೆಯ ಪ್ರಮಾಣ ಪತ್ರ ನೀಡಲು ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ವೈಧ್ಯರಲ್ಲಿ ಚರ್ಚಿಸಿದ್ದೇನೆ. ಈ ಬಗ್ಗೆ ವೈದ್ಯರಾದ ಗಣೇಶ್ ಟಿ.ಹೆಚ್. ಹಾಗೂ ವೈದ್ಯರಾದ ಶ್ರೀನಿವಾಸ ನಾಯಕ ಅವರು ಸಕಾರಾತ್ಮಕವಾಗಿ ಸ್ವಂದಿಸಿದ್ದಾರೆ ಎಂದು ಹೇಳಿದರು.