ಕುಮಟಾ:ಮನೆಯಿಂದ ಗೋವಾ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ಮಂಗಳವಾರ ತಾಲೂಕಿನ ಹೆಗಡೆಯಲ್ಲಿ
ನಾಗರಾಜ್ ಮುಕ್ರಿಯ ಶವ ಪತ್ತೆಯಾಗಿದೆ.
ನಾಗರಾಜ್ ಮುಕ್ರಿ (30) ಹೆಗಡೆ ಮೂಲದ ನಿವಾಸಿಯಾಗಿದ್ದು ಇತನು ಸೋಮವಾರ ಮಧ್ಯಾಹ್ನ ಗೋವಾಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯವರಿಗೆ ಹೇಳಿ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಕಾಲು ಜಾರಿ ಗಟಾರಕ್ಕೆ ಬಿದ್ದು ಸಾವನ್ನಪಿದ್ದಾನೆ ಎನ್ನಲಾಗಿದ್ದು, ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.