Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಹೊನ್ನಾವರದ ನೂತನ ಬಸ್ ನಿಲ್ದಾಣ ಉದ್ಘಾಟನೆ

ಹೊನ್ನಾವರ : ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿದ್ದ ಹೊಸ ಬಸ್ ನಿಲ್ದಾಣದ ಕನಸುನನಸಾಗಿದ್ದು, ಸುಸಜ್ಜಿತ ಹೊಸ ಬಸ್ ನಿಲ್ದಾಣವನ್ನು ಸಾರಿಗೆ ಸಚಿವ ಬಿ.ರಾಮುಲು ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಜನತೆಯ ಜೊತೆಗೆ ಸದಾ ಇದ್ದು ಅವರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಈ ನೂತನ ಬಸ್ ನಿಲ್ದಾಣ ಬಗ್ಗೆ ಶಾಸಕ ದಿನಕರ ಶೆಟ್ಟಿಯವರು ಹಲವಾರು ಬಾರಿ ನನ್ನನ್ನು ಭೇಟಿಯಾಗಿದ್ದರು, ಅವರ ಜನಪರ ಖಾಳಜಿಗೆ ಮೆಚ್ಚಲೇ ಬೇಕು. ಅವರು ಉತ್ತಮ ಕಾರ್ಯ ಮಾಡುತ್ತಿರುವುದು ಮುಖ್ಯಮಂತ್ರಿಯವರ ಗಮನಕ್ಕೆ ಬಂದಿದೆ ಎಂದು ಅಭಿಪ್ರಾಯಪಟ್ಟರು.


ಶಾಸಕ ದಿನಕರ ಶೆಟ್ಟಿ ಮಾತನಾಡಿ ಬಸ್ ನಿಲ್ದಾಣ
ನಿರ್ಮಾಣ ಬಹುದಿನಗಳ ಕನಸಾಗಿತ್ತು. ಈ ಕುರಿತು
ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕಷ್ಟಪಟ್ಟು
ಮಂಜೂರಿಯಾಗಲು ಶ್ರಮಪಟ್ಟಿದ್ದೆನೆ. ಇದಕ್ಕೆ
ಬೆಂಬಲವಾಗಿ ನಿಂತ  ಸಾರಿಗೆ ಸಚಿವ ಬಿ.ರಾಮುಲು ಅವರನ್ನು ಮನ:ಪೂರ್ವಕವಾಗಿ ಅಭಿನಂಧಿಸುತ್ತೇನೆ
ಈ ಭಾಗದಲ್ಲಿ ಗುಡ್ಡಗಾಡು ಪ್ರದೇಶಗಳು
ಜಾಸ್ತಿಯಿದ್ದು ಹೆಚ್ಚಿನ ಬಸ್ಸುಗಳ ಅಗತ್ಯವಿದೆ
ಕಾರಣ ಹೆಚ್ಚುವರಿ ಬಸ್ ಗಳನ್ನು ನೀಡುವಂತೆ
ಸಚಿವರಲ್ಲಿ ಮನವಿ ಮಾಡಿದರು.

ಭಟ್ಕಳದ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಇಲ್ಲಿಯ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಅವರ ಮುತುವರ್ಜಿತನ ಹೆಚ್ಚಿದೆ. ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಅವರು ನಮ್ಮೆಲ್ಲರಿಗಿಂತ ಹೆಚ್ಚುಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದುಪ್ರಶಂಸಿಸಿದರು.

ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ,
ನಾಗರಾಜ ನಾಯಕ ತೊರ್ಕೆ,ಶಿವರಾಜ ಮೇಸ್ತ,
ಸಂತೋಷಕುಮಾರ ಪಾಟೀಲ,ಅಶೋಕ ಮಳಗಿ. ಜಿಲ್ಲಾಧ್ಯಕ್ಸ ವೆಂಕಟೇಶ್ ನಾಯಕ ಇನ್ನಿತರರು ಇದ್ದರು