Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ರಾಜು ಮಾಸ್ತಿ ಹಳ್ಳ ಅವಿರೋಧವಾಗಿ ಆಯ್ಕೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ರಾಜು ಮಾಸ್ತಿ ಹಳ್ಳ ಅವಿರೋಧವಾಗಿ ಆಯ್ಕೆಯದರು. ಜಿಲ್ಲಾ ಗೌರವಾಧ್ಯಕ್ಷರಾಗಿ ಆರ್.ಜಿ.ನಾಯ್ಕ ಆಯ್ಕೆಯಾದರು. ಪ್ರಸ್ತುತ ಕರ್ನಾಟಕ ರಕ್ಷಣಾ ವೇಧಿಕೆಯ ಸ್ವಾಭಿಮಾನಿ ಬಣದ ಮೂಲಕ ಜಿಲ್ಲೆಯ, ಜ್ವಲಂತ ಸಮಸ್ಯೆಗಳಿಗೆ ಹೋರಾಟದ ಮೂಲಕ  ಧ್ವನಿಯಾಗಿ ಜಿಲ್ಲೆಯ ಹಾಗೂ ತಾಲೂಕಿನ ಜನರಿಗೆ ಚಿರಪರಿಚಿತ ಆಗಿದ್ದರು. ಇವರ ಕನ್ನಡ ಪರ ಸೇವೆಯನ್ನು ಗುರುತಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಮಾತನಾಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷರಾದ ರಾಜು ಮಾಸ್ತಿ ಹಳ್ಳ ಮಾತನಾಡಿ ನನ್ನ ಮೇಲೆ ವಿವಿಧ ಸಂಘಟನೆಯವರು ನಂಬಿಕೆ ಇಟ್ಟು ಅವಿರೋದವಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆಗಳ ವಿಶ್ವಾಸವನ್ನು ಪಡೆದುಕೊಂಡು ಕೆಲಸ ಮಾಡುತ್ತೇನೆ. ನನಗೆ ಪ್ರತಿಯೊಂದು ಹಂತದಲ್ಲೂ ಹಿರಿಯ ವಕೀಲರಾದ ಆರ್.ಜಿ.ನಾಯ್ಕ ಸರ್ ಅವರ ಮಾರ್ಗದರ್ಶನ ಮಾಡುತ್ತಿರುವುದು ನನಗೆ ಹೋರಾಟಕ್ಕೆ ಇನಷ್ಟು ಶಕ್ತಿ ಬಂದಂತಾಗಿದೆ. ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಿ ಸರಕಾರದ ಗಮನ ಸೆಳೆದು ಸಾರ್ವಜನಿಕರಿಗೆ ನ್ಯಾಯ ಕೊಡಿಸುವಂತ  ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಗೌರವಾಧ್ಯಕ್ಷರಾದ ಆರ್.ಜಿ.ನಾಯ್ಕ ಮಾತನಾಡಿ ನಮ್ಮ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಪ್ರತಿಯೊಬ್ಬರ  ಸಹಕಾರ ಅಗತ್ಯವಿದೆ ಎಂದರು.
ಈ ವೇಳೆ ಮಂಗಲದಾಸ ನಾಯ್ಕ, ಮಂಜುನಾಥ ಗೌಡ, ಜ್ಞಾನೇಶ್ವರ ನಾಯ್ಕ, ಸಚಿನ್ ನಾಯ್ಕ, ರಾಜೇಶ ನಾಯ್ಕ, ಶ್ರೀರಾಮ ಹೊನ್ನಾವರ, ನಾಗರಾಜ ಶೇಟ್, ಕುಮಾರ ಗೌಡ, ಲಂಬೋದರ ಗೌಡ, ಧರ್ಮೇಂದ್ರ ಪಟಗಾರ, ಗಣೇಶ ನಾಯ್ಕ,ಹರಿಶ್ಚಂದ್ರ ಮುಕ್ರಿ, ಕೆ.ಎನ್ ಮಂಜು, ಉಲ್ಲಾಸ ನಾಯ್ಕ, ವಿನೋದ ಕೊಡಿಯಾ ಕೇಶವ ಗೌಡ ಹಾಗೂ ಕರವೇ ನಾರಾಯಣ ಗೌಡ ಬಣ, ಕರವೇ ಗಜಸೇನೆ, ಕರವೇ ಪ್ರವೀಣ ಶೆಟ್ಟಿ ಬಣ,ಕರವೇ ಸ್ವಾಭಿಮಾನಿ ಬಣ, ಕರುನಾಡ ವಿಜಯಸೇನೆ, ಕ್ರಾಂತಿರಂಗ ಕನ್ನಡ ಸಂಘ,ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರು ಹಾಗೂ ಸದಸ್ಯರು ಇದ್ದರು.