ಕುಮಟಾ: ಗಾಳಿ ಮಳೆಯಿಂದಾಗಿ ಪಟ್ಟಣದ ಉಪ್ಪಿನಗಣಪತಿ ದೇವಸ್ಥಾನದ ಹತ್ತಿರ ಗಂಗಾಧರ ಗೌಡ ಅವರ ಮನೆಯ ಮೇಲೆ ಹಲಸಿನ ಮರವು ಬಿದ್ದು ಮನೆಯು ಸಂಪೂರ್ಣವಾಗಿ ಹಾನಿ ಸಂಭವಿಸಿದೆ.
ಮರವು ಬಿದ್ದ ರಭಸಕ್ಕೆ ಪಕ್ಕದಲ್ಲಿದ್ದ ಗಣೇಶ ಗೌಡ ಅವರ ಮನೆಗೂ ಹಾನಿ ಸಂಭವಿಸಿದೆ. ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಭೇಟಿ ನೀಡಿ, ಸಂತ್ರಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ತಕ್ಷಣ ತಾಲೂಕಾಡಳಿತದ ಸಂಭಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ, ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಕೂಲಿ ಮಾಡಿ ಬದುಕಟ್ಟಿಕೊಳ್ಳುವಂತಹ ಬಡ ಕುಟುಂಬವಾಗಿದ್ದು,ತಕ್ಷಣ ಪರಿಹಾರವನ್ನು ನೀಡಬೇಕು ಸರಕಾರವೂ ಮನೆಕಟ್ಟಿಕೊಳ್ಳಲು ಸರಕಾರದಿಂದ ಸಿಗುವಂತಹ ಸೌಲಭ್ಯವನ್ನು ಮುತುವರ್ಜಿಯನ್ನು ವಹಿಸಿ ಮಾಡಿಕೊಡಬೇಕು ಎಂದರು.