Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬೆಟ್ಕುಳಿಯ ಸಂತ್ರಸ್ತರ ಕುಟುಂಬಕ್ಕೆ ತಲಾ 5ಲಕ್ಷ ರೂಪಾಯಿ ಪರಿಹಾರ

ಕುಮಟಾ: ತಾಲೂಕಿನ ಪೋಸ್ಟ್ ಬೆಟ್ಕುಳಿಯ ನಿವಾಸಿಗಳಾಗಿದ್ದ ಸತೀಶ್ ಪಾಂಡುರಂಗ ನಾಯ್ಕ (38)  ಮತ್ತು ಉಲ್ಲಾಸ ಜಟ್ಟಿ ಗಾವಡಿ (50) ಇವರು ಗುರುವಾರ ಅಘನಾಶಿನಿ ನದಿಯ ಅಂಚಿನಲ್ಲಿರುವ ಗದ್ದೆಗೆ ಬೇಲಿನಿರ್ಮಿಸಲು ಹೋಗಿದ್ದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆಬಿದ್ದು ಮೃತರಾಗಿದ್ದರು.


ಕಂದಾಯ ಇಲಾಖೆ ಸಚಿವ  ಕೃಷ್ಣಭೈರೇಗೌಡ, ಅವರು ಇಂದು ಮೃತರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ತಲಾ 5,00,000 ರೂಪಾಯಿಗಳ ಚೆಕ್ ಅನ್ನು ಮೃತರ ಮನೆಯವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ  ಮಂಕಾಳು ವೈದ್ಯ, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ  ದಿನಕರ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಹಾಯಕ ಆಯುಕ್ತ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ನಾಯಕಲಮಠ, ತಾ. ಪಂ. ಕಾರ್ಯನಿರ್ವಣಾಧಿಕಾರಿ  ನಾಗರತ್ನಾ ನಾಯಕ, ಗ್ರಾ. ಪಂ. ಅಧ್ಯಕ್ಷೆ  ವಿಶಾಲಾಕ್ಷಿ  ಪಟಗಾರ, ಸದಸ್ಯರುಗಳಾದ  ಸಂತೋಷ ಹರಿಕಾಂತ,  ವಿಠೋಬ ಗಾವಡಿ, ನವೀನ ಪಟಗಾರ ಮುಂತಾದವರು ಉಪಸ್ಥಿತರಿದ್ದರು.