ಕುಮಟಾ: ಅಳ್ವೇಕೋಡಿ ನಿವಾಸಿ ಗಣೇಶ ನಾಯ್ಕ ತಾಲೂಕಿನ ಹೊನ್ಮಾವ್ ಸಮೀಪ ವಾಹನ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕುಮಟಾ ಹಾಗೂ ಸುತ್ತಲ ಸ್ಥಳಗಳಲ್ಲಿ ಎಲ್ಲಿಯೇ ವಾಹನಗಳು ಪಂಕ್ಚರ್ ಆದರೂ ಕೂಡಲೇ ಸ್ಥಳಕ್ಕೆ ಬಂದು ಪಂಕ್ಚರ್ ತೆಗೆದುಕೊಡುತ್ತಿದ್ದ ಈತ ತನ್ನ ವಾಹನದಲ್ಲಿ ಹೋಗುವಾಗ ವಾಹನ ಅಪಘಾತವಾಗಿದೆ. ಅಪಘಾತ ಪಡಿಸಿ ಪರಾರಿಯಾಗಿರುವ ವಾಹನದ ಬಗ್ಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.