Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ನಾನು ಹೇಳಿರೋದೆ ಬೇರೆ, ಹೇಳಿದನ್ನ ಮರೆಮಾಚಲಾಗಿದೆ : ಸಚಿವ ಮಂಕಾಳು ವೈದ್ಯ


ಭಟ್ಕಳ : ದೇಶದ ಕಾನೂನು, ಸಂವಿದಾನದ ಕುರಿತಾಗಿ ನಾನು ಮಾತನಾಡಿಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನಸ್ಸಿಗೆ ಬಂದ ಹಾಗೆ ಹರಿಬಿಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ  ಸೋಶಿಯಲ್ ಮಿಡಿಯಾ ನಿಯಂತ್ರಣ ಮಾಡುವಲ್ಲಿ ವಿಫಲ ಆಗಿರವ ಬಗ್ಗೆ ಮಾತ್ನಾಡಿಸಿದ್ದೇನೆ ಹೊರತು ಬೇರೆ ರೀತಿಯಲ್ಲಿ ಮಾತಾಡಿಲ್ಲ. ನಾನು ಯಾವ ವಿಚಾರವನ್ನ ಮಾತ್ನಾಡಿದ್ದೇನೋ ಅದನ್ನೆ ಮರೆ ಮಾಚಲಾಗಿದೆ ಎಂದು ಮೀನುಗಾರಿಕಾ ಬಂದರು ಸಚಿವ ಮಂಕಾಳು ವೈಧ್ಯ ಪ್ರತಿಕ್ರಿಯೆಸಿದ್ದಾರೆ.


ನಾನು ಹೇಳಿರುವುದನ್ನ ತಿರುಚುವ ಪ್ರಯತ್ನ ಮಾಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಎಷ್ಟೆ ನಿಂದನೆ ಮಾಡಿ ಇನ್ನೊಬ್ಬರ ತೇಜೋವಧೆ ಮಾಡಿದರು ಇದುವರೆಗೆ ಒಂದೆ ಒಂದು ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕೆಲಸವಾಗಿಲ್ಲ, ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು, ನಾನು ಸಹ ಪೋಲಿಸರಿಗೆ ಕೊಟ್ಟಿದ್ದೇನೆ, ಇನ್ನೂ ತನಕ ಆ ಬಗ್ಗೆ ಏನು ಕ್ರಮವಾಗಿಲ್ಲ. ಆ ಬಗ್ಗೆ ನನಗೂ ಸಹ ಅಸಮಧಾನವಿದೆ.

ಈ ವಿಚಾರವನ್ನೇ ಅಂದು ಮಾಧ್ಯಮದವರು ಕೇಳಿದರು. ಅದಕ್ಕೆ ನಾನು ಸಾಮಾಜಿಕ ಜಾಲತಾಣದ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಕಾನೂನು ಸರಿಯಾಗಿ ಇಲ್ಲ. ಅದನ್ನ ಮತ್ತಷ್ಟು ಬಿಗುಗೊಳಿಸಬೇಕು ನಿಟ್ಟಿನಲ್ಲಿ ಹೇಳಿದ್ದೇನೆ. ಆದರೆ ನಾನು ಹೇಳಿರುವ ವಿಚಾರವನ್ನ ಬಿಟ್ಟು ಬೇರೆ ವಿಚಾರವನ್ನ ಸೇರಿಸಿ ಹರಿಬಿಡುವ ಪ್ರಯತ್ನ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವಿಷಯಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಇಷ್ಟು ಬಿಗಿಯಾಗಬೇಕಿದೆ ಎಂದು ಹೇಳಿದ್ದಾರೆ.