ಕುಮಟಾ: ತಾಲೂಕಿನ ಉಪ್ಪಿನಪಟ್ಟಣ ಸೇವಾ ಸಹಕಾರಿ ಸಂಘ ಕತಗಾಲದ ನೂತನ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈಯವರ ತಂಡ ಸಂಪೂರ್ಣ ಬಹುಮತ ಸಾಧಿಸುವುದರ ಮೂಲಕ ಗೆಲುವು ಸಾಧಿಸುವುದರ ಮೂಲಕ ಸೇವಾ ಸಹಕಾರಿ ಸಂಘದ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಗಜಾನನ ಪೈ, ದೇವು ತಿಮ್ಮಪ್ಪ ಗೌಡ, ವಿವೇಕ ಮಹಾಬಲೇಶ್ವರ ಜಾಲಿಸತ್ಗಿ, ಅನಂತ ಲಕ್ಷ್ಮಣ ಶಾನಭಾಗ, ವೆಂಕಟರಣ ಪರಮೇಶ್ವರ ಹೆಗಡೆ, ಸಾಲಗಾರ ಹಿಂದುಳಿದ ಅ ಕ್ಷೇತ್ರದಿಂದ ವಿನಾಯಕ ಮಂಜಪ್ಪ ನಾಯ್ಕ, ಸಾಲಗಾರ ಹಿಂದುಳಿದ ವರ್ಗ ಬ ದಿಂದ ಪ್ಲೆವಿಯನ್ ಪ್ರಾಸ್ಸಿನ್ ಫರ್ನಾಂಡಿಸ್,ಸಾಲಗಾರ ಮಹಿಳೆ ಕ್ಷೇತ್ರದಿಂದ ನಾಗರತ್ನಾ ಗಜಾನನ ಭಟ್, ರಾಧಾ ಮಹಾಬಲೇಶ್ವರ ನಾಯ್ಕ, ಸಾಲಗಾರ ಪರಿಶಿಷ್ಟ ಜಾತಿಯಿಂದ ವೆಂಕಟರಮಣ ಮುಕ್ರಿ, ಲಕ್ಷ್ಮಿ, ಸಾಲಗಾರ ಪ.ಪಂಗಡ ಸಹದೇವ ವಾಲೇಕರ, ಸಾಲಗಾರರಲ್ಲದ ಕ್ಷೇತ್ರದಿಂದ ಮಹೇಶ ನಾರಾಯಣ ದೇಶಬಂಡಾರಿ ಗೆಲುವು ಸಾಧಿಸಿದ್ದಾರೆ.