ಕಾರವಾರ: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಬುಧವಾರ ( ಜುಲೈ 5) ರಂದು ಕರಾವಳಿ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಜುಲೈ 5 ರಂದು ಬಾರಿ ಮಳೆಯಾಗಲಿರುವ ಸೂಚನೆಯನ್ನು ಕರ್ನಾಟಕ ನೈಸರ್ಗಿಕ ಉಸ್ತುವಾರಿ ಕೇಂದ್ರ ಬೆಂಗಳೂರು ರವರು ಮಾಹಿತಿ ನೀಡಿದ್ದು ಹೀಗಾಗಿ ಜಿಲ್ಲಾಡಳಿತ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕರಾವಳಿಯ ಐದು ತಾಲೂಕುಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರಕ್ಕೆ ಮಾತ್ರ ಸೀಮಿತವಾಗಿ ದ್ವಿತೀಯ ಪಿಯುವರೆಗಿನ ಶಾಲಾ- ಕಾಲೇಜುಗಳಿಗೆ Deputy Commissioner Uttara Kannada ಅವರು ನಾಳೆ (ಜು.05) ರಜೆ ಘೋಷಿಸಿದ್ದಾರೆ.