Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಹಿರೇಗುತ್ತಿಯ ಸಂಭ್ರಮ ನಾಯಕ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ


ಕುಮಟಾ: ಕುಮಾರ ಸಂಭ್ರಮ ಮಂಜುನಾಥ ನಾಯಕ ಹಿರೇಗುತ್ತಿ ೭ನೇ ತರಗತಿ ಅಪೂರ್ವ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಳಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ರಾಜ್ಯಮಟ್ಟದ ಇನೈರ್ ಅವಾರ್ಡ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರಸ್ತುತ ನಿರ್ಮಲ ಹೃದಯ ಅಂಕೋಲಾ  ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಾನೆ. ಈತನು ತಯಾರಿಸಿದ ವಿಜ್ಞಾನ ಮಾದರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
         ಈತನ ಶೈಕ್ಷಣಿಕ ಸಾಧನೆಗೆ ಅಪೂರ್ವ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ನಿರ್ಮಲ ಹೃದಯ ಅಂಕೋಲಾ  ಪ್ರೌಢಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು, ಗ್ರಾಮಪಂಚಾಯತ ಅಧ್ಯಕ್ಷರಾದ ನಾಗರತ್ನ ಗಾಂವಕರ,  ಉಪಾಧ್ಯಕ್ಷರಾದ ಶಾಂತಾ ಎನ್ ನಾಯಕ, ಮಹಾಲಸಾ ಸಿದ್ದಿವಿನಾಯಕ ಟೆಂಪಲ್ ಧರ್ಮದರ್ಶಿಗಳಾದ ಸುನೀಲ ಪೈ. ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷರಾದ ಜಗದೀಶ ನಾಯಕ, ಆಶ್ರಯ ಪೌಂಡೇಶನ್ ರಾಜೀವ ಗಾಂವಕರ, ಸ್ಪಂದನ ಫೌಂಡೇಶನ್‌ನ ಎನ್. ರಾಮು ಹಿರೇಗುತ್ತಿ, ಮಾದನಗೇರಿ. ಹಿರೇಗುತ್ತಿ ಆರ್.ಎಫ್.ಓ. ಪ್ರವೀಣ ನಾಯಕ, ಹಿರೇಗುತ್ತಿ ಊರನಾಗರಿಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ ಉಪನಿರ್ದೇಶಕರಾದ ಲತಾ ನಾಯಕ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಮಟಾ ಪ್ರಾಚಾರ್ಯರಾದ ಎನ್.ಜಿ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಲ್.ಭಟ್ಟ್  ಇವರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭಹಾರೈಸಿದರು.