ಹೊನ್ನಾವರ: ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಯನ್ಸ್ ಸಭಾಂಗಣದಲ್ಲಿ ಜರುಗಿತು. ನೂತನ ಅಧ್ಯಕ್ಷರಾಗಿ ಶಿಕ್ಷಕ ಎಂ ಜಿ ನಾಯ್ಕ, ಕಾರ್ಯದರ್ಶಿಯಾಗಿ ಮಹೇಶ ನಾಯ್ಕ ಹಾಗೂ ಖಜಾಂಚಿಯಾಗಿ ಶಿವಾನಂದ ಭಂಡಾರಿ ಆಯ್ಕೆಯಾದ್ರು. ಇವರಿಗೆ ಅಧಿಕಾರ ಹಸ್ತಾಂತರ ಮತ್ತು ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ವೈಸ್ ಗವರ್ನರ್ ಮನೋಜ ಮನಿಕ್ ಭೋಧಿಸಿದ್ರು.
ಬಳಿಕ ಲಯನ್ಸ್ ಕ್ಲಬ್ ನಡೆದು ಬಂದ ಹಾದಿಯ ಸ್ಥೂಲ ಪರಿಚಯ ಮಾಡಿ ಮಾತನಾಡಿದ ಗವರ್ನರ್ ಹೊಸ ಪದಾಧಿಕಾರಿಗಳಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ಲಯನ್ಸ್ ಗೆ ಉತ್ತಮ ಹೆಸರು ತರುವಂತೆ ಕಾರ್ಯ ನಿರ್ವಹಿಸುವಂತೆ ಕಿವಿ ಮಾತು ಹೇಳಿದ್ರು. ಬಳಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ಎಂ ಜಿ ನಾಯ್ಕ ಮಾತನಾಡಿ ಸಿಕ್ಕ ಅವಕಾಶಕ್ಕೆ ದನ್ಯವಾದ ಹೇಳುವ ಜೊತೆಗೆ ಹೊನ್ನಾವರ ಲಯನ್ಸ್ ಕ್ಲಬ್ ಮಾದರಿಯಾಗಿ ಕೆಲಸ ನಿರ್ವಹಿಸಲಿದೆ. ಈ ವರ್ಷ ಪ್ಲಾಸ್ಟಿಕ್ ಮುಕ್ತ ಹೊನ್ನಾವರ ಮಾಡಲು ಲಯನ್ಸ್ ಕ್ಲಬ್ ಕಟಿಬದ್ಧವಾಗಿದೆ. ಇದರ ಜೊತೆಗೆ ಇನ್ನೂ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.