ಕುಮಟಾ:ತಾಲೂಕಾ ನಾಮಧಾರಿ ಸಮಾಜದ ಯುವ ನಾಮಧಾರಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ರಾಜೇಶ ಎಂ.ನಾಯ್ಕ ಬರ್ಗಿ ಆಯ್ಕೆಗೊಂಡಿದ್ದಾರೆ.
ಯುವ ನಾಮಧಾರಿ ಸಂಘದ ಪದಾಧಿಕಾರಿಗಳ ಆಯ್ಕೆ ಕುಮಟಾ ನಾಮಧಾರಿ ಮಾತೃ ಸಂಘದ ನೇತೃತ್ವದಲ್ಲಿ ನಾಮಧಾರಿ ಸಭಾಭವನದಲ್ಲಿ ನಡೆಯಿತು.ಉಪಾಧ್ಯಕ್ಷರಾಗಿ ವೈಭವ ನಾಯ್ಕ ಕೋನಳ್ಳಿ, ದತ್ತಾತ್ರೇಯ ನಾಯ್ಕ ಹೆಗಡೆ ಕಾರ್ಯದರ್ಶಿಯಾಗಿ, ನಿತೀನ ನಾಯ್ಕ ಮೂರೂರು, ಸಹ ಕಾರ್ಯದರ್ಶಿಯಾಗಿ ವಿಷ್ಣು ನಾಯ್ಕ ಅಘನಾಶಿನಿ ಕೋಶಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೋಶಾಧ್ಯಕ್ಷ ಕಮಲಾಕರ ನಾಯ್ಕ, ಸಂಘಟನಾ ಕಾರ್ಯದರ್ಶಿ ಸಂತೋಷ ನಾಯ್ಕ,ನಿರ್ದೇಶಕರಾದ ನಾಗೇಂದ್ರ ನಾಯ್ಕ, ಚಂದ್ರಹಾಸ ನಾಯ್ಕ, ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಭಾಗದ ನಾಮಧಾರಿ ಯುವಕರು ಈ ಸಂಧರ್ಭದಲ್ಲಿ ಹಾಜರಿದ್ದರು.