ಭಟ್ಕಳ : ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಉಲ್ಭಣಗೊಂಡು ಹೆದ್ದಾರಿಯೇ ನೀರು ತುಂಬಿ ಹೊಳೆಯಂತಾಗುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈಧ್ಯ ಐ.ಆರ್.ಬಿಯಿಂದ ಆದ ತೊಂದರೆಯನ್ನು ಗುರುತಿಸಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಭಟ್ಕಳದಲ್ಲಿ ಮಳೆಯ ಅವಾಂತರದಿಂದ ಜನರ ತೊಂದರೆಯನ್ನು ಅರಿತು, ಭಟ್ಕಳಕ್ಕೆ ದೌಡಾಯಿಸಿ ಬಂದಿರುವ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಐ.ಆರ್.ಬಿ. ಕಂಪನಿಯ ಅಧಿಕಾರಿಗಳೊಂದಿಗೆ ಮಳೆ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಐ,ಆರ್,ಬಿ ಕಂಪನಿಯಿಂದ ನಿರಂತರವಾಗಿ ಜನರಿಗೆ ತೊಂದರೆಯಾಗುತ್ತಿದೆ. ಜನರ ಸಮಸ್ಯೆ ಅವರಿಗೆ ಅರ್ಥವಾಗುತ್ತಿಲ್ಲ. ಇಂಜಿನೀಯರ ಆಗಿರುವರಿಗೂ ಸಮಸ್ಯೆಗೆ ಪರಿಹಾರ ತಿಳಿಯುತ್ತಿಲ್ಲ. ಐ.ಆರ್.ಬಿ ಸಮಸ್ಯೆ ಬಗೆಹರಿಯದೇ, ಇದ್ದರೆ ಮೊದಲು ಟೋಲ್ ಸಂಗ್ರಹ ಬಂದ್ ಮಾಡಿ, ಐ..ಆರ್.ಬಿ ಕಂಪನಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದರು.