Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಸಂತ್ರಸ್ಥರಿಗೆ ದೈರ್ಯ ತುಂಬಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ನಿರಂತರವಾಗಿ ಸುರಿದ ಮಳೆಯ ಪರಿಣಾಮ ವಾಲಗಳ್ಳಿ, ಗ್ರಾ.ಪಂ ವ್ಯಾಪ್ತಿಯ ಊರುಕೇರಿ ಗ್ರಾಮದ ಕೆಳಗಿನ ಕೇರಿಗೆ ಹಾಗೂ ಹೆಗಡೆಯ ಜೋಡುಕರೆ ಭಾಗದಲ್ಲಿ  ನೀರು ನುಗ್ಗಿದ್ದ ಸ್ಥಳಗಳಿಗೆ ಶಾಸಕರಾದ ದಿನಕರ ಶೆಟ್ಟಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು. ವಾಲಗಳ್ಳಿ ಕೆಳಗಿನ ಕೇರಿಯ ೧೯ ಮನೆಗಳು ಒಟ್ಟು ೩೧ ಜನರಿಗೆ ಕಡವು ಹಿ. ಪ್ರಾ ಶಾಲೆಗೆ ಸ್ಥಳಾಂತರಿಸಲಾಯಿತು. 
 ಸಂತ್ರಸ್ಥರಿಗೆ ದೈರ್ಯ ತುಂಬುವ ಕಾರ್ಯ ಮಾಡಿದರು. ಅಗತ್ಯ ಮುನ್ನೆಚ್ಚರಿಕೆಯ ಕ್ರಮವನ್ನು ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಆಹಾರ ವ್ಯವಸ್ಥೆಯ ಹಾಗೂ ವಸತಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಶಾಸಕರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಳೆದ ಭಾರಿಯು ನೆರೆಹಾವಳಿ ಬಂದ ಸಂಧರ್ಭದಲ್ಲಿ ನದಿ ತೀರದ ನೆರೆ ಪಡಿತ ಪ್ರದೇಶದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವ ಕೆಲಸ ಮಾಡಿದ್ದೇವೆ.
 ಕಳೆದ ಸಲ ಮನೆಗೆ ನೀರು ನುಗ್ಗಿದ ಮನೆಯವರಿಗೆ ೧೦ ಸಾವಿರ ನೀಡುವಂತಹ ಕೆಲಸ ಮಾಡಿದ್ದೇವೆ. ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು. ಈ ಸಂಧರ್ಭದಲ್ಲಿ ವಾಲಗಳ್ಳಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ ಶಾನಭಾಗ, ಉಪಾಧ್ಯಕ್ಷೆಎ ಗಂಗಾ ಪಟಗಾರ ತಾಲೂಕು ಪಂಚಾಯತ ಇ.ಓ ನಾಗರತ್ನ ನಾಯಕ, ನೋಡಲ್ ಅಧಿಕಾರಿ ವಿನಾಯಕ ವೈಧ್ಯ, ಪಿ.ಎಸ್.ಐ ಪದ್ಮ ದೇವಳಿ ಪಿ.ಡಿ.ಓ ವೀಣಾ ನಾಯ್ಕ, ಕಾರ್ಯದರ್ಶಿ ನಾಗರಾಜ ಶೆಟ್ಟಿ ಸೇರಿದಂತೆ ಇತರಿದ್ದರು.