ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಗಂಗೂಬಾಯಿ ರಮೇಶ್ ಮನಕರ್ ರವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಅವರು ಈ ಹಿಂದೆ ಬೆಂಗಳೂರಿನ ವಾರ್ತಾ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಇನ್ನು ಪ್ರಭುಲಿಂಗ ಕವಳಿಕಟ್ಟಿಯವರಿಗೆ ಯಾವ ಸ್ಥಾನ ಎಂದು ನಿಗದಿಯಾಗಿಲ್ಲ. ಗಂಗೂಬಾಯಿ ಮಾನಕರ್ ಕುಮಟಾದಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಕಳೆದ 2012ರ ಅಕ್ಟೋಬರ್ 21 ರಂದು ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಹಿಲನ್ ವರ್ಗಾವಣೆ ಮಾಡಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನ ನೇಮಕ ಮಾಡಲಾಗಿತ್ತು. ಜಿಲ್ಲಾಧಿಕಾರಿಯಾಗಿ ಒಂದು
ವರ್ಷ ಕಳೆಯುವ ಮುನ್ನವೇ ಸರ್ಕಾರ ವರ್ಗಾವಣೆ ಮಾಡಿ
ಆದೇಶಿಸಿದೆ.
ಗಂಗೂಭಾಯಿ ಮಾನಕರ್ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಆಗಿ, ಬೆಳಗಾವಿಯ ಅಟಲ್ ಜನಸ್ನೇಹಿ, ಕೇಂದ್ರದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದು ಈ ಹಿಂದೆ, ಅವರು ಜಿಲ್ಲಾಧಿಕಾರಿಯಾಗಿ ಆಗಮಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು.