Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಮರ ಬಿದ್ದು ಹಾನಿಯಾದ ಕುಟುಂಬಕ್ಕೆ 24 ಗಂಟೆ ಒಳಗೆ ಪರಿಹಾರ ನೀಡಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಗಾಳಿ ಮಳೆಯಿಂದಾಗಿ ಪಟ್ಟಣದ ಉಪ್ಪಿನ ಗಣಪತಿ ದೇವಸ್ಥಾನದ ಹತ್ತಿರದ ನಿವಾಸಿಗಳಾದ  ಚಂದ್ರವತಿ ಗಂಗಾಧರ ಗೌಡ ಅವರ ಮನೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಬಡತನದಲ್ಲಿ ಬದುಕು ಕಟ್ಟಿಕೊಂಡಿರುವ, ಕುಟುಂಬಕ್ಕೆ ಸಮಸ್ಯೆಯಾಗಿತ್ತು. ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ 24 ಗಂಟೆ ಒಳಗೆ ಶಾಸಕರಾದ ದಿನಕರ ಶೆಟ್ಟಿ ಪ್ರಕೃತಿ ವಿಕೋಪದ  ಅಡಿಯಲ್ಲಿ ಪರಿಹಾರ ನೀಡಿದ್ದಾರೆ.


ಅವರ  ಕುಟುಂಬಕ್ಕೆ 1.20ಲಕ್ಷ ರೂ. ಹಾಗೂ ಪಕ್ಕದ ಮನೆಗೆ ಸ್ವಲ್ಪ ಹಾನಿಯಾದ ಗಣೇಶ ತಿಮ್ಮಣ್ಣ ಗೌಡ ಅವರಿಗೆ 6,500ರೂ. ಪರಿಹಾರ ಧನದ ಚೆಕ್ ಅನ್ನು  ಶಾಸಕ ದಿನಕರ ಶೆಟ್ಟಿ ಅವರು ಹಸ್ತಾಂತರ ಮಾಡಿದರು.

ತಹಶೀಲ್ದಾರ್ ಎಸ್. ಎಸ್. ನಾಯ್ಕಲಮಠ, ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್ ನಾಯ್ಕ್, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಮೋಹನ ನಾಯ್ಕ, ಜಿ. ಪಂ. ಅಭಿಯಂತರ ಸಂಜಯ ನಾಯಕ, ವಲಯ ಅರಣ್ಯಾಧಿಕಾರಿಗಳಾದ ಎಸ್. ಟಿ. ಪಟಗಾರ ಹಾಗೂ ರಾಜು ನಾಯ್ಕ್, ಮಂಡಲ ಬಿಜೆಪಿ ಅಧ್ಯಕ್ಷ ಹೇಮಂತ್ ಗಾಂವಕರ ಅವರು ಈ ಸಂದರ್ಭದಲ್ಲಿ ಇದ್ದರು.