Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಜನಸ್ನೇಹಿ ಪಿಎಸ್ಐ ಆನಂದಮೂರ್ತಿಗೆ ಬಡ್ತಿ ಬೆಂಗಳೂರು ಐಎಸ್ ಡಿಗೆ ವರ್ಗಾವಣೆ

ಹೊನ್ನಾವರ:  ಪೋಲಿಸ್ ಠಾಣೆಯ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂತ್ಯದ ಮಾನವೀಯ ಹಾಗೂ ದಕ್ಷ ಪೋಲಿಸ್ ಅಧಿಕಾರಿ ಎಂದು ಈವರೆಗೂ ಪ್ರಶಂಸಿಸಲ್ಪಡುತ್ತಿದ ಆನಂದಮೂರ್ತಿಗೆ  ಸಿಪಿಐ ಐಎಸ್ ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ (ಐ ಎಸ್ ಡಿ) ಕ್ಕೆ ವರ್ಗಾಯಿಸಲಾಗಿದೆ.


ಆನಂದಮೂರ್ತಿ ಪಿಎಸ್ಐ ಆಗಿ ಕಾರವಾರ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು ನಂತರ ಗೋರ್ಕಣ. ಹೊನ್ನಾವರ ಕುಮಟಾ ನಂತರ ಮತ್ತೆ ಹೊನ್ನಾವರ ಕ್ಕೆ ಪಿಎಸ್ಐ ಆಗಿ ಪುನಃ ಬಂದವರು  ಪಿಎಸ್ಐ ಆಗಿ ಜನಸಾಮಾನ್ಯರೊಂದಿಗೆ ಹೊಸದಾದ ಮಾನವೀಯ ಸಂಸ್ಕೃತಿ ಬೆಸೆದ ಆನಂದಮೂರ್ತಿಯವರನ್ನು ಯಾರು ದೂಷಿಸುವಂಥ ವಾತಾವರಣವೇ  ಇರಲಿಲ್ಲ. ಅವರು ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು ತನ್ನ ಸಿಬ್ಬಂದಿಗಳಾದ ಪೋಲಿಸ್ ಕಾನಸ್ಟೇಬಲ್ ಗಳ ಬಗ್ಗೆ ಕಾಳಜಿ ಹಾಗೂ ಹೊರ ಠಾಣೆಯಿಂದ ಕಾರ್ಯ ನಿಮಿತ್ತ ಆಗಮಿಸಿದ  ಪೋಲಿಸರಿಗೆ ಊಟ ಕೊಟ್ಟು ಕಳುಹಿಸುವ ಮನೋಭಾವ ಅವರದ್ದಾಗಿತ್ತೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲದ ಆನಂದಮೂರ್ತಿಯವರಿಗೆ ಉತ್ತರ ಕನ್ನಡದ ಜನರು ಅವರ ಭಾವನೆಗಳಿಗೆ ಇಷ್ಟವಾದವರಂತಿದ್ದರು.