Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕಡತೋಕಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಧ್ವಜಾರೋಹಣ

ಹೊನ್ನಾವರ : ಕಡತೋಕಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ  75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅತ್ಯಂತ ಸಂಭ್ರಮದಿಂದ ವಿದ್ಯುದ್ದೀಪಗಳಿಂದ ಕಟ್ಟಡವನ್ನು ಅಲಂಕರಿಸಿ ವಾದ್ಯ ಮೇಳಗಳೊಡನೆ  ಧ್ವಜಾರೋಹಣವನ್ನು  ಸಂಘದ ಅಧ್ಯಕ್ಷರು ಹಾಗೂ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ನೆರವೇರಿಸಿದರು.


 ನಂತರ ಮಾತನಾಡಿದ ಅವರು ನಮಗೆ ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳು ಪೂರ್ಣಗೊಂಡಿದ್ದು ಇಡೀ ದೇಶ ಸಂಭ್ರಮಿಸುತ್ತಿದೆ. ಜಗತ್ತಿನಾದ್ಯಂತ ನಮ್ಮ ದೇಶವನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಹಲವು ನಾಯಕರು ನಮ್ಮ ದೇಶವನ್ನು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ದಿ ಪಡಿಸಿದ್ದು ನಮ್ಮ ದೇಶ ಭಾರತವೆಂದು ಹೇಳಲಿಕ್ಕೆ ಅತ್ಯಂತ ಹೆಮ್ಮೆ ಆಗುತ್ತದೆ ಎಂದರು. ಆದಾಗ್ಯೂ ನಮ್ಮ ದೇಶದಲ್ಲಿ ಭಾಷೆ  ಜಾತಿ ಧರ್ಮಗಳ ನಡುವೆ ನಡೆಯುತ್ತಿರುವ ಗಲಭೆಗಳು, ಭಯೋತ್ಪಾದನೆ ಇವುಗಳು ದೇಶವನ್ನು ಹಿಂದಕ್ಕೆ ಒಯ್ಯುತ್ತಿವೆ. ಕಠಿಣ ಕಾನೂನುಗಳ ಮೂಲಕ ಇವುಗಳನ್ನು ತಡೆಗಟ್ಟಬೇಕು ಎಂದರು ಅಲ್ಲದೆ ನಮ್ಮ ಸಂಘದಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಕಡತೋಕಾ ಮತ್ತು ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಮನೆಗಳಿಗೂ ಉಚಿತವಾಗಿ ಸಂಘದಿಂದ ಕೆಲ ದಿನಗಳ ಹಿಂದೆ ರಾಷ್ಟ್ರದ್ವಜ ವಿತರಿಸಲಾಗಿದೆ ಎಂದರು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

 ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಿರಿಯರಾದ ಎಸ್ ಶಂಭು ಭಟ್, ವಿ ಜಿ ಭಟ್ಟ, ನವಿಲಗೋಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ ಹೆಬ್ಬಾರ, ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಭಟ್ಟ, ನಿರ್ದೇಶಕರುಗಳಾದ ಸುರೇಶ ಪಟಗಾರ, ಪ್ರಭಾಕರ ಭಟ್ಟ, ಎಲ್ ಎನ್ ಭಟ್ಟ, ಶಂಕರ ಭಟ್ಟ, ರಾಮಚಂದ್ರ ಭಟ್ಟ, ಹೊಸಬು ಗೌಡ, ನವೀನ ಮುಕ್ರಿ,  ಮಂಗಲಾ ಭಟ್ಟ,  ಸಾವಿತ್ರಿ ಪಟಗಾರ,  ಗ್ರಾಮ ಪಂಚಾಯತ ಸದಸ್ಯರಾದ  ಸಾವಿತ್ರಿ ಭಟ್ಟ,  ನೇತ್ರಾವತಿ ಮುಕ್ರಿ, ಪುರಂದರ ನಾಯ್ಕ, ಹರಿಶ್ಚಂದ್ರ ನಾಯ್ಕ, ಕಿರಣ ಭಂಡಾರಿ, ಬಾಲು ಭಂಡಾರಿ, ರಾಘವೇಂದ್ರ ದೇಶಭಂಡಾರಿ, ರವಿ ಪಟಗಾರ ಮಾಡಗೆರಿ,   ಜಗದೀಶ್ ನಾಯ್ಕ ಮತ್ತು ನೂರಾರು ಜನರು ಪಾಲ್ಗೊಂಡಿದ್ದರು.