ಕಾರವಾರ : ಕಾರವಾರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸೇರಿದ ನೂರಾರು ಪ್ರತಿಭಟನಾಗಾರರು ತಮ್ಮ ದೇಹದ ರಕ್ತ ತೆಗೆದು ಪತ್ರದಲ್ಲಿ ವೀ ನೀಡ್ ಎಮರ್ಜನ್ಸಿ ಹಾಸ್ಪೆಟಲ್ ,ನಮಗೆ ಬೇಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದು ಪ್ರಧಾನಿಗೆ ಪತ್ರ ಬರೆದು ಕಳುಹಿಸಿರುವ ಘಟನೆ ನಡೆದಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಇಂದು ಕಾರವಾರದಲ್ಲಿ ವಿವಿಧ ಸಂಘಟನೆ ಗಳು ಹಾಗೂ ಶಾಲಾ ,ಕಾಲೇಜು ವಿದ್ಯಾರ್ಥಿಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ನೇತ್ರತ್ವದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಕಾರವಾರದಲ್ಲಿ ರಕ್ತದಿಂದ ಪ್ರಧಾನಿ ಮೋದಿಗೆ ಪತ್ರ ಬರೆದ ಶೀಘ್ರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವಂತೆ ಆಗ್ರಹಿಸಿದಾರೆ.
ಆಸ್ಪತ್ರೆ ಶೀಘ್ರದಲ್ಲಿ ಆಗದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ಸದಸ್ಯರು, ವಿದ್ಯಾರ್ಥಿ ವಕ್ಕೂಟದ ಅಧ್ಯಕ್ಷ ರಾಘವನಾಯ್ಕ , ಸೆಂಟ್ ಮಿಲಾಗ್ರಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ ಪರ್ನಾಂಡಿಸ್ , ರೋಟರಿ ಸಂಸ್ಥೆಯ ಸದಸ್ಯರು,ಹಿರಿಯ ನಾಗರೀಕರ ವೇದಿಕೆ ಸದಸ್ಯರು, ಕಾರವಾರ ನಗರದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.