ಕುಮಟಾ: ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀನಾರಾಯಣ ದೇವಸ್ಥಾನ ರಥಬೀದಿ ಇಲ್ಲಿ ನಡೆಯುತ್ತಿರುವ ಗೋಕರ್ಣ ಪರ್ಥಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀ ಶ್ರೀಮದ್ ವಿದ್ಯಾಧೀಶ ತೀರ್ಥ ವಡೇರ ಸ್ವಾಮಿಜಿಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಮಾಜಿ ಶಾಸಕಿಯರಾದ ಶಾರದಾ ಮೋಹನ್ ಶೆಟ್ಟಿ ಹಾಗೂ ಯುವ ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿಯವರು ಕುಟುಂಬ ಸಮೇತರಾಗಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಟಿ.ನಾಯ್ಕ, ರಾಜೇಶ್ ಪ್ರಭು ಮುಂತಾದವರು ಹಾಜರಿದ್ದರು.