Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕ್ರೀಡಾಕೂಟದಲ್ಲಿ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳ ಸಾಧನೆ.

ಕುಮಟಾ : ತಾಲೂಕಿನ ಕೊಂಕಣಿ ಎಜುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ವಿಭಾಗಗಳಲ್ಲಿ ಬಹುಮಾನವನ್ನು ಜಯಿಸುವುದರ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆದಿದ್ದಾರೆ.

ಸುಚಿತ ಶ್ರೀಧರ ನಾಯ್ಕ-  100 ಮೀ ಪ್ರಥಮ, ಸುಚಿತ ಶ್ರೀಧರ ನಾಯ್ಕ -  400 ಮೀ ಪ್ರಥಮ, ಪನ್ನಗ ಮಂಜುನಾಥ ಗೌಡ - 200 ಮೀ ಪ್ರಥಮ, ನಿತಿನ ಪ್ರಭಾಕರ ನಾಗೇಕರ -600 ಮೀ ಪ್ರಥಮ, ಪನ್ನಗ ಮಂಜುನಾಥ ಗೌಡ -  ಎತ್ತರ ಜಿಗಿತ  -ಪ್ರಥಮ, ಅಗಸ್ತ್ಯ ನಾಗರಾಜ ನಾಯ್ಕ- ಚೆಸ್ - ಪ್ರಥಮ, ಎಚ್.ಎಂ ಶ್ರೀರಕ್ಷಾ  - 100 ಮೀ ಹಾಗೂ 200 ಮೀ ಪ್ರಥಮ, ಪ್ರಿಯಾ ನಾಗರಾಜ ಗೌಡ 400 ಮೀ ಪ್ರಥಮ, ಪ್ರಿಯಾ ನಾಗರಾಜ ಗೌಡ -  ಗುಂಡು ಎಸೆತ  ಪ್ರಥಮ, ಬಾಲಕರ ಯೋಗಾಸನ - ವಿಜಯ ನಾಗರಾಜ ಪಟಗಾರ –ಪ್ರಥಮ, ಸಾಯಿಷ ದಿನೇಷ ನಾಯ್ಕ -  ಪ್ರಥಮ ಬಾಲಕಿಯರ ಯೋಗಾಸನ – ಯುಕ್ತಾ ಸತೀಶ ಗೌಡ -ಪ್ರಥಮ, ದಿಕ್ಷಾ ಸಂತೋಷ ಭಟ್ಟ - ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ. ಲೋಹಿತ ಜೊತೆಗೆ ಹರಿಕಂತ್ರ  -ಗುಂಡು ಎಸೆತ - ದ್ವಿತಿಯ, ಶ್ರೇಯಾ ಪಟಗಾರ- 600 ಮೀ ಓಟ 400 -ಮೀ ಓಟ ದ್ವಿತಿಯ ಸ್ಥಾನ ಪಡೆದಿರುತ್ತಾರೆ.

ಇದಲ್ಲದೆ ಗುಂಪು ಸ್ಪರ್ಧೆಗಳಾದ ಬಾಲಕರ ರಿಲೆ -  ಪ್ರಥಮ, ಬಾಲಕರ ಕಬಡ್ಡಿ – ಪ್ರಥಮ, ಬಾಲಕಿಯರ ರಿಲೆ – ಪ್ರಥಮ, ಬಾಲಕಿಯರ ವಾಲಿಬಾಲ್ – ಪ್ರಥಮ, ಬಾಲಕರ ವಾಲಿಬಾಲ್ – ದ್ವಿತಿಯ, ಬಾಲಕರ ಖೋಖೋ – ದ್ವಿತಿಯ
ಬಾಲಕಿಯರ ಥ್ರೋಬಾಲ್ - ದ್ವಿತಿಯ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇವರು ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದು, ತಾಲೂಕ ಮಟ್ಟದಲ್ಲಿಯೂ ಸಾಧನೆ ಮುಂದುವರಿಸುವಂತೆ ಶುಭ ಹಾರೈಸಿದರು.