ಕುಮಟಾ : ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಸಮಾನತೆಯ ಹರಿಕಾರ ದಿವಂಗತ ದೇವರಾಜ್ ಅರಸು ಅವರ ಜಯಂತಿ ಅಂಗವಾಗಿ ಶಾಸಕ ದಿನಕರ ಕೆ ಶೆಟ್ಟಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ತಾಲೂಕ ಆಡಳಿತ ತಾಲೂಕು ಪಂಚಾಯತ ಹಾಗೂ ಪುರಸಭೆ ಕುಮಟಾ ಮತ್ತು ಹಿಂದುಳಿದ ವರ್ಗದ ಇಲಾಖೆ ಆಯೋಜಿಸಲಾಗಿದೆ ಮಾಜಿ ಮುಖ್ಯಮಂತ್ರಿ,ದೇವರಾಜ್ ಅರಸು 107 ನೇ ವರ್ಷದ ಜನ್ಮದಿನದ ಆಚರಣೆ ಶಾಸಕ ದಿನಕರ ಶೆಟ್ಟಿ ಉದ್ಘಾಟನೆ ನಡಿಸಿ ಮಾತನಾಡಿ ಅರಸು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ. ಹಿಂದುಳಿದ ವರ್ಗಗಳ ಪರವಾಗಿ ಕಾಳಜಿ ಹೊಂದಿದ್ದ ಅವರು, ಸಮಾಜಕ್ಕೆ ಮಾಡಿರುವ ಕಾರ್ಯಗಳು ಅಚ್ಚಳಿಯದೆ ಉಳಿದಿವೆ. ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ , ಕರ್ನಾಟಕ ಋಣಮುಕ್ತ ಕಾಯ್ದೆ ತಂದು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅವರು ಈ ನಾಡಿಗೆ ಕೊಟ್ಟಂತಹ ಸೇವೆ, ಜಾರಿಗೆ ತಂದ ಕಾರ್ಯಕ್ರಮ ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು
ಇನ್ನೂ ಈ ಕಾರ್ಯಕ್ರಮದಾ ಉಪನ್ಯಾಸಕರಾದ ಆಗಮಿಸಿದ ವಿಶ್ರಾಂತ ಪ್ರಾಧ್ಯಾಪಕದರಾದ ಡಾ. ಎಮ್. ಆರ್. ನಾಯಕ ಮಾತನಾಡಿ ಅರಸು ಅವರಿಗೆ ಹುಟ್ಟುಹಬ್ಬದ ನಮನಗಳು. ಅವರೆದೆಯ ಹಾಡಾದ ಸಾಮಾಜಿಕ ನ್ಯಾಯದ ಹೋರಾಟ ಇನ್ನೂ ಗುರಿಮುಟ್ಟಿಲ್ಲ. ಅವರು ಪ್ರಾರಂಭಿಸಿದ ಪರಿವರ್ತನೆಯ ಪಯಣ ನಿಲ್ಲಬಾರದು. ಮುಂದೆ ಸಾಗುತ್ತಲೇ ಇರಬೇಕು. ಇದೇ ನಾವೆಲ್ಲರೂ ಕೂಡಿ ದೇವರಾಜ ಅರಸು ಅವರಿಗೆ ಸಲ್ಲಿಸುವ ಗೌರವ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯ ತಂದು ಕೊಟ್ಟ, ಭೂ ಸುಧಾರಣೆ ಜಾರಿಗೆ ತಂದ, ದುರ್ಬಲರ ದನಿಯಾಗಿದ್ದ ಅರಸು ಅವರ ಜನ್ಮದಿನವಿಂದು. ಶಾಶ್ವತ ಕಾರ್ಯಗಳು, ಆಲೋಚನೆಗಳ ಮೂಲಕ ಸದಾ ನಮ್ಮೊಂದಿಗೆ ಇರುವ ಅರಸರ ಆದರ್ಶ ಇಂದು ಎಲ್ಲ ರಾಜಕಾರಣಿಗಳಿಗೂ ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಾಘವೇಂದ್ರ ಬಿ ಜಗಲಾಸರ್, ಪುರಸಭೆ ಅಧ್ಯಕ್ಷೆ ಅನುರಾಧ ಬಾಳೆರೇ,ತಹಸೀಲ್ದಾರ್ ವಿವೇಕ್ ಸೆನ್ವಿ, ಪುರಾಸಭೆ ಮುಖ್ಯಧಿಕಾರಿ ಅಜಯ್ ಬಂಡರಕರ್, ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನ ನಾಯಕ,ತಾಲೂಕು ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಗಣೇಶ್ ಜಿ ಪಟಗಾರ ಇದ್ದರೂ
ಇನ್ನೂ ಈ ಕಾರ್ಯಕ್ರಮದಲ್ಲಿ ಸ್ವಾಗತ ಹಾಡು ಬರೆದ ಗಣೇಶ್ ಜಿ ಪಟಗಾರ ಹಾಗೂ ಹಾಡಿದ ರೂಪಾ ಸಂಗಡಿರಿಗೆ ಶಾಸಕ ದಿನಕರ ಶೆಟ್ಟಿ ಮೆಚ್ಚಿಗೆ ವ್ಯಕ್ತಪಡಿಸಿದರು.