ಕುಮಟಾ: ಸಂಕುಚಿತ ಮನೋಭಾವವನ್ನು ತೊರೆದು ಜಾತಿ, ಮತ ಧರ್ಮ ಬೇಧವನ್ನು ಮರೆತು ದೇಶಾಭಿಮಾನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕೆಂದು ಬಿಜೆಪಿ ಮುಖಂಡ, ಬೆಳಕು ಗ್ರಾಮೀಣಾಭಿವೃದ್ದಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಕರೆ ನೀಡಿದರು.
ಅವರು ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕತಗಾಲದ ಎಸ್.ಕೆ.ಪಿ ಹೈಸ್ಕೂಲ್‌ನ ಸಹಯೋಘದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ. ಆರ್. ಭಾರತಿ ಜ್ಞಾನದಿಂದ ಮಾತ್ರ ಸ್ವಚ್ಛ ಸದೃಢ, ಸುಂದರ ಭಾರತವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ 22 ವರ್ಷಗಳ ಕಾಲ ದೇಶ ರಕ್ಷಣೆಗಾಗಿ ದುಡಿದ ನಿವೃತ್ತ ಸೈನಿಕ ಸ್ಥಳೀಯ ಉಪ್ಪಿನಪಟ್ಟಣದ ನಿವಾಸಿ ಶ್ರೀಧರ ಅಂಬಿಗರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಧ್ಯಾಪಕ ಎಸ್ ಎಸ್ ಕೊರವರ ವಹಿಸಿದ್ದರು.ನಿಲೇಶ ಎನ್ ಅಂಬಿಗ, ಗಔರೀಶ ಎಮ್ ಅಂಬಿಗ, ಜ್ಯೋತಿ ಎಸ್ ದೇಶಭಂಡಾರಿ ಸಹಕರಿಸಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಂಭವಿ ಎಚ್. ಅಂಬಿಗ ದೇಶಭಕ್ತಿ ಗೀತೆ ಹಾಡಿದರು.ಶಾಲಾ ಕನ್ನಡ ಶಿಕ್ಷಕ ಅಶೋಕ ಭಟ್ ಸ್ವಾಗತಿಸಿದರು.