Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಹರ್ ಘರ್ ತಿರಂಗಾ ಸಿದ್ದತೆಯ ಪೂರ್ವಭಾವಿ ಸಭೆ


ಕುಮಟಾ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ನಿಮಿತ್ತ ಪ್ರಧಾನಿ ನರೇಂದ್ರ ಮೋಧಿ ಆಶಯದಂತೆ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಪ್ರತಿ ಮನೆಗಳಲ್ಲಿಯೂ ಆ.13 ರಿಂದ ಆ 15ರವರೆಗೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕರೆ ನೀಡಿದರು.
ಅವರು ಕುಮಟಾ ಪಟ್ಟಣದ ತಾಪಂ ಸಭಾಭವನದಲ್ಲಿ ಹರ್ ಘರ್ ತಿರಂಗಾ ಸಿದ್ದತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹರ್ ಘರ್ ತಿರಂಗಾ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು  ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ವಿನಂತಿಸಿದ ಅವರು ಕುಮಟಾ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದ  ಮನೆಗಳು ಹಾಗೂ ಪಟ್ಟಣ ವ್ಯಾಪ್ತಿಯ ಮನೆಗಳ ಮೇಲೆ ಧ್ವಜ ಹಾರಿಸಬೇಕಿದ್ದು ಎಲ್ಲ ಮನೆಗಳಿಗೂ ಸರ್ಕಾರದಿಂದ ಧ್ವಜ ನೀಡಲಾಗುತ್ತದೆ. ಆ ೧೩ ರಿಂದ ಆ ೧೫ ರವರೆಗೆ ಪ್ರತಿ ಮನೆಗಳಲ್ಲಿಯೂ ಧ್ವಜ ಹಾರಾಡುತ್ತಿರಬೇಕು, ಅಲ್ಲದೇ ಪ್ರತಿ ಇಲಾಖೆಯಲ್ಲಿಯೂ ಧ್ವಜ ಹಾರಾಡುತ್ತಿರಬೇಕು ಎಂದರು.
ನಂತರ ಬರ್ಗಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರತೀಕ್ಷಾ ಚಂದ್ರಕಾಂಥ ನಾಯ್ಕ, ಅಘನಾಶಿನಿಯ ಪೌಢಶಾಲೆಯ ಅಕ್ಷತಾ ನಾಯ್ಕ, ನೆಲ್ಲಿಕೇರಿ ಪ್ರೌಢಶಾಲೆಯ ಅನನ್ಯ ಹಳದೀಪುರ ಇವರಿಗೆ  ಲ್ಯಾಪ್‌ಟಾಪ್ ಅನ್ನು ಶಾಸಕ ದಿನಕರ ಶೆಟ್ಟಿ ವಿತರಣೆ ಮಾಡಿದರು.
ಈ ವೇಳೆ ಸಹಾಯ ಆಯುಕ್ತರಾದ ರಾಘವೇಂದ್ರ ಜಗಲಸರ್ ದಯಟ್ ಪ್ರಾಚಾರ್ಯ ಎನ್.ಜಿ.ನಾಯಕ, ತಾ;ಊಕಾ ಕಾರ್ಯನಿರ್ವಹಣಾಧಿಕಾರಿ, ನಾಗರತ್ನಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಹಾಗೂ ಇತರು ಹಾಜರಿದ್ದರು.