ಕುಮಟಾ: ಕ್ರೀಯಾಶೀಲತೆಯ ವ್ಯಕ್ತಿತ್ವದ ಜೋತೆ ಜೋತೆಗೆ ಜನಸೇವೆ ಮಾಡುವುದರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತವರು ಹೊನ್ನಾವರ ತಾಲೂಕಿನ ಹಳದೀಪುರ ಗ್ರಾ.ಪಂ ಅಧ್ಯಕ್ಷರಾದ ಅಜೀತ ನಾಯ್ಕ, ಯಾವುದೇ ರಾಜಕೀಯ ಪಕ್ಷವನ್ನು ಸೇರದೆ ತಮ್ಮ ಸಮಾಜ ಸೇವೆಯಿಂದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಗ್ರಾ.ಪಂ ಪಂಚಾಯತನ ಸೌಲಭ್ಯಗಳನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿಸಬೇಕು ಎನ್ನುವ ಆಶಯದೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ ಅಂದ್ರು ಅತಿಶಯೋಕ್ತಿಯಾಗಲಾರದು.
ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಚಿಂತನೆಯನ್ನು ಒಳಗೊಂಡು ಸದಾ ಅಭಿವೃದ್ದಿ ಪರ ಚಿಂತನೆಯನ್ನು ಮಾಡುವ ಜನ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಕುಮಟಾ ಬ್ಲಡ್ ಬ್ಯಾಂಕ್ ಅಲ್ಲಿ ರಕ್ತದಾನ ಮಾಡಿ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಣೆ ಮಾಡಿದರು. ನಂತರ ಮಾತನಾಡಿದ ಅಜೀತ ನಾಯ್ಕ ಅವರು ನನ್ನ ಗೆಳೆಯರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದಂದು ಅನಾಥ ಆಶ್ರಮದಲ್ಲಿ ಆಚರಣೆ ಮಾಡಿದ್ದೇವೆ ಹಾಗೂ ರಕ್ತದಾನ ಮಹಾದಾನವಾಗಿದ್ದು, ಅಪಘಾತವಾದ ಸಂಧರ್ಭದಲ್ಲಿ ಜನರ ಜೀವವನ್ನು ಉಳಿಸಲು ರಕ್ತಧಾನವು ಸಹಾಯಕವಾಗುತ್ತದೆ. ಆ ನಿಟ್ಟಿನಲ್ಲಿ ನನ್ನ ಗೆಳೆಯರು ಹಾಗೂ ನಾನು ಎಲ್ಲರು ರಕ್ತದಾನವನ್ನು ಮಾಡುವುದರ ಮೂಲಕ ನನ್ನ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹಳದೀಪುರ ಗ್ರಾ.ಪಂ ಸದಸ್ಯರಾದ ಗಿರೀಶ ಗೌಡ, ಕೃಷ್ಣ ನಾಯ್ಕ, ಪ್ರಸನ್ನ ನಾಯ್ಕ ನಾಗರಾಜ್ ನಾಯ್ಕ, ಆರ್.ಕೆ. ಮೆಸ್ತಾ,ಗಣಪತಿ ನಾಯ್ಕ, ಕಿರಣ ಮೆಸ್ತಾ, ದತ್ತಾತ್ರೇಯ ನಾಯ್ಕ, ರಾಘವೇಂದ್ರ ಗೌಡ, ವಿನಾಯಕ ಮಡಿವಾಳ, ಮಂಜುನಾಥ ಮುಕ್ರಿ ಇತರಿದ್ದರು.