ಕುಮಟಾ: ಐತಿಹಾಸಿಕ ಮಿರ್ಜಾನ ಕೋಟೆಯಲ್ಲಿ ೭೫ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರವಾಸಿಗರು, ಹಾಗೂ ಊರಿನ ನಾಗರಿಕರು ಸಾಕ್ಷಿಯಾದರು.
ಧ್ವಜಾರೋಹಣವನ್ನು ಮಿರ್ಜಾನ ಗ್ರಾ.ಪಂ ಅಧ್ಯಕ್ಷರಾದ ಪರಮೇಶ್ವರ ಪಟಗಾರ ಅವರು ನೇರವೇರಿಸಿದರು. ಧ್ವಜಾರೋಹಣವನ್ನು ನೇರವೇರಿಸಿದರು. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿರುವುದಕ್ಕೆ ಹೆಮ್ಮೆ ಏನಿಸುತ್ತದೆ. ನಾನು ಗ್ರಾ.ಪಂ ಅಧ್ಯಕ್ಷನಾಗಿ ನಮ್ಮ ದೇಶದ ೭೫ ವರ್ಷದ ಅಮೃತ ಮಹೋತ್ಸದಲ್ಲಿ ಧ್ವಜಾರೋಹಣ ಮಾಡುತ್ತಿರುವುದು ನನ್ನ ಜೀವನದ ಅವೀಸ್ಮರಣಿಯ ಕ್ಷಣವಾಗಿದೆ. ಸ್ವಾತಂತ್ರ್ಯೋತ್ಸವದ ಹೋರಾಟವು ನಮ್ಮ ಜಿಲ್ಲೆಯಲ್ಲಿ ಉಪ್ಪಿನ ಚಳುವಳಿ ನಡೆದಿದೆ. ಅನೇಕ ನಾಯಕರ ಹೋರಾಟದ ತ್ಯಾಗದ ಫಲವಾಗಿ ನಾವು ಸ್ವತಂತ್ರ್ಯವಾಗಿದ್ದೇವೆ. ನಾವು ದೇಶದಲ್ಲಿ ನಾವೆಲ್ಲರೂ ಒಂದೆ ಎನ್ನುವ ಭಾವನೆ ಮೂಡಿದಾಗ ಮಾತ್ರ ದೇಶವು ಅಭಿವೃದ್ದಿ ಪತದತ್ತ ಸಾಗಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು.
ಹಿರಿಯ ಪ್ರಾಥಮಿಕ ಶಾಲೆ ಮಿರ್ಜಾನ ಹಾಗೂ ಆಂಗ್ಲ ಮಾದ್ಯಮ ಶಾಲಾ ವಿದ್ಯಾರ್ಥಿಗಳು, ದೇಶಭಕ್ತಿ, ಗೀತೆಗಳ ನೃತ್ಯ, ಐತಿಹಾಸಕ ಕ್ಷಣಕ್ಕೆ ಸಾಕ್ಷಿಯಾದಂತಿತ್ತು. ಮಿರ್ಜಾನ ಕೋಟೆಗೆ ದಾರವಾಡದ ಪುರಾತತ್ವ ಇಲಾಖೆಯಿಂದ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ರಾತ್ರಿ ವೇಳೆ ವಿದ್ಯುತ ಅಲಂಕಾರ ಮಾಡಿರುವುದಕ್ಕೆ ಕೋಟೆಯ ಅಂದವು ಹೆಚ್ಚಿತ್ತು. ಈ ವೇಳೆ ಕೋಡ್ಕಣಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಾಜೇಶ ಪಟಗಾರ, ಗ್ರಾಮ ಪಂಚಾಯತ ಸದಸ್ಯರು, ಗ್ರಾ.ಪಂ ಪಿ.ಡಿ.ಯೊ, ಶಾಲಾ ಶಿಕ್ಷಕರು, ಪ್ರವಾಸಿಗರು, ಊರಿನ ನಾಗರಿಕರು ಇದ್ದರು.