Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಕ್ರೀಡಾ ಸಾಧನೆಯಲ್ಲಿ ಗುರುತು ಮೂಡಿಸಿದ ಹಿರೇಗುತ್ತಿ ಕಾಲೇಜು

ಕುಮಟಾ:  ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉತ್ತರ ಕನ್ನಡ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಬಾಡ ಇವರ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಕ್ರೀಡಾಕೂಟ “ಗಾಂಧಿವನ ಕ್ರೀಡಾಂಗಣ ಕಡ್ಲೆ’’ಕುಮಟಾ (ಉ.ಕ) ಇಲ್ಲಿ ನಡೆಯಿತು. ಸರಕಾರಿ ಪದವಿ ಪೂರ್ವ ಕಾಲೇಜು, ಹಿರೇಗುತ್ತಿ ಕುಮಟಾ(ಉ.ಕ) ಇಲ್ಲಿಯ ವಿದ್ಯಾರ್ಥಿನಿಯರು ಖೋಖೋ ಆಟದಲ್ಲಿ  ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ಚರಣ ಮಡಿವಾಳ ಈತನು ೮೦೦ ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. 
ಅಲ್ಲದೆ ಭುವನ ಎಮ್ ನಾಯ್ಕ ಸರಪಳಿಗುಂಡು ಎಸೆತ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಬೀರಣ್ಣ ಎಸ್ ಗೌಡ ೧೫೦೦ ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚರಣ ಮಡಿವಾಳ ೧೦೦ ಮೀ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಚಾರು ಬೊಮ್ಮ ಗೌಡ ೮೦೦ ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಕರ ಸಂಘದ ಕುಮಟಾ ತಾಲೂಕಾ ಅಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ ಬಹುಮಾನ ವಿತರಿಸಿದರು.


ಗ್ರಾಮೀಣ ಭಾಗದ ಈ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಅಧ್ಯಕ್ಷರು, ಮಾನ್ಯ ಶಾಸಕರೂ ಆದ ಶ್ರೀ ದಿನಕರ ಕೆ. ಶೆಟ್ಟಿಯವರು, ಕಾಲೇಜು ಅಭಿವೃದ್ಧಿ ಸಮಿತಿಯ ಎಲ್ಲಾ ಸದಸ್ಯರುಗಳು, ಪ್ರಭಾರಿ ಪ್ರಾಚಾರ್ಯರಾಗಿರುವ ಅರುಣ ಎನ್ ಹೆಗಡೆ ಹಾಗೂ ಎಲ್ಲಾ ಉಪನ್ಯಾಸಕರು ಮತ್ತು ಗೌರವಾನ್ವಿತ ಊರ ನಾಗರಿಕರು ಅಭಿನಂದನೆ ಸಲ್ಲಿಸಿರುತ್ತಾರೆ.