ಈ ವಿಷಯ ಇವರ ಗಮನಕ್ಕೆ ಬಂದಿರಲಿಲ್ಲ. ಆದೆ ಮಾರ್ಗದಲ್ಲಿ ತೆರಳುತಿದ್ದ ಮೂಲತಃ ತಾಲೂಕಿನ ಚಿಕ್ಕನಕೋಡ ಗ್ರಾ.ಪಂ ಹಿರೆಬೈಲ್ ನಿವಾಸಿ ಪ್ರಮೋದ ಜಯಂತ ನಾಯ್ಕ ಇವರು ಬ್ಯಾಗ ಗಮನಿಸಿದರು. ಬ್ಯಾಗ ಒಳಗಡೆ ಹಣ, ಎ.ಟಿ.ಎಂ ಮೊಬೈಲ್ ಇರುವುದನ್ನು ಗಮನಿಸಿ ನೇರವಾಗಿ ಹೊನ್ನಾವರ ಪೋಲಿಸ್ ಠಾಣೆಗೆ ಆಗಮಿಸಿದ್ದರು. ಪಿ.ಎಸೈ ಸಾವಿತರಿ ನಾಯಕ ಇವರ ಬಳಿ ವಿಷಯ ಗಮನಕ್ಕೆ ತಂದಾಗ ಸಂಭದಿಸಿದ ಮಹಿಳೆಯನ್ನು ಠಾಣೆಗೆ ಕರೆಯಿಸಿ ಬ್ಯಾಗನ್ನು ಹಸ್ತಾಂತರಿಸಿದರು. ಪ್ರಮೋದ ನಾಯ್ಕ ಇವರ ಪ್ರಾಮಾಣಿಕತೆಗೆ ಸಾರ್ವಜನಿಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.