ಕಾರವಾರ: ಕಳೆದ ಏಳು ವರ್ಷಗಳಿಂದ ಮತ್ತು ೪೦೦ಕ್ಕೂ ಹೆಚ್ಚು ವಾರಗಳಿಂದ ಸ್ವಚ್ಚತಾ ಕಾರ್ಯದಲ್ಲಿ ಪ್ರತಿವವಾರ ಕೈಗೋಳ್ಳುವ ಪಹರೆ ವೇಧಿಕೆಗೆ ಕರ್ನಾಟಕದ ರಾಜ್ಯಪಾಲ ಧಾವರ್‌ಚಂದ ಗೆಹ್ಲೋಟ್ ಪ್ರಶಂಸಿಸಿ ಗೌರವಿಸಿದರು.
ಅಂತರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ ಅಂಗವಾಗಿ ಸೆ.೧೭ ರಂದು ಕಾರವಾರದ ಕಡಲ ತೀರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದ ನಂತರ ಮಯೂರವರ್ಮ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಹರೆ ವೇಧಿಕೆಗೆ ವಿಶೇಷ ಗೌರ ನೀಡಲಾಯಿತು.
ಅಂತರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆ ಅಂಗವಾಗಿ ಸೆ.೧೭ ರಂದು ಕಾರವಾರದ ಕಡಲ ತೀರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದ ನಂತರ ಮಯೂರವರ್ಮ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಹರೆ ವೇಧಿಕೆಗೆ ವಿಶೇಷ ಗೌರ ನೀಡಲಾಯಿತು.
ಕಳೆದ ಏಳು ವರ್ಷಗಳಿಂದ ಪ್ರತಿವಾರದ ಸ್ಚಚ್ಛತೆ ಕೈಗೋಳ್ಳುವ ಮೂಲಕ ನಿರಂತರ ೪೦೩. ವಾರಗಳಿಂದಲೂ ಸ್ವಚ್ಛತೆಯ ಹರಿಕಾರರಂತೆ ಪಹರೆ ಬಳಗದವರು ಸ್ವಚ್ಛತಾ ಸೇವೆ ಕೈಗೋಳ್ಳುತ್ತಿದ್ದು, ಇದರ ಅಂಗವಾಗಿ ಜಿಲ್ಲಾಡಳಿತ ಪಹರೆ ವೇದಿಕೆಯವರನ್ನು ಸಮ್ಮಾನಿಸುವ ಕಾರ್ಯಕ್ಕೆ ಮುಂದಾಗಿತು. ಸೆ.೧೭ ರಂದು ರಾಜ್ಯಪಾಲರು ಕಾರವಾರದ ಕಡಲತೀರದಲ್ಲಿ ಜರುಗಿದ ಅಂತರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನಾಚರಣೆಯಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಧರ್ಭದಲ್ಲಿ ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಸೇರಿದಂತೆ ಬಳಗದವರನ್ನು ರಾಜ್ಯಪಾಲರು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅರ್ಧಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಐಕ, ವೇದಿಕೆಯಲ್ಲಿದ್ದ ಮುಖ್ಯಸ್ಥೆ ಅಡ್ಮಿರಲ್ ಅತುಲ, ಜಿಲ್ಲಾಧಿಕಾರಿ ಮುಲೈ ಮುಹಿಲನ್, ಜಿ.ಪಂ. ಸಿಇಓ ಪ್ರಿಯಾಂಗ, ಎಸ್ಪಿ ಡಾ.ಸುಮನ್ ಪನ್ನೇಕರ ಮತ್ತಿತರರು ಉಪಸ್ಥಿತರಿದ್ದರು.