Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಹವ್ಯಕ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ಶಂಕರ ಶಾಸ್ತ್ರಿ ಅಂತಿಮ ದರ್ಶನ‌ ಪಡೆದ ಗಣ್ಯರು

ಕುಮಟಾ: ತಾಲೂಕಿನ ಪ್ರಸಿದ್ಧ ನ್ಯಾಯವಾದಿಗಳು ಹಾಗೂ ಹವ್ಯಕ ವಿದ್ಯಾ ವರ್ಧಕ ಸಂಘ ಕುಮಟಾ ಇದರ ಅಧ್ಯಕ್ಷರು, ಶ್ರೀ ಉಪ್ಪಿನ ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಆಗಿದ್ದ ಶ್ರೀ ಶಂಕರಮೂರ್ತಿ ಶಾಸ್ತ್ರಿ ಕೊನೆಯುಸಿರೆಳೆದಿದ್ದು ಅವರ ಪಾರ್ಥಿವ ಶರೀರವನ್ನು ಕುಮಟಾದ ಹವ್ಯಕ ಸಭಾ ಭವನದಲ್ಲಿ ಇಟ್ಟು ಗೌರವ ವಂದನೆ ಸಲ್ಲಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಲೂಕಿನ ಪ್ರಸಿದ್ಧ ವಕೀಲರಲ್ಲಿ ಒಬ್ಬರಾಗಿದ್ದ ಇವರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಇದೀಗ ಅವರು ತಮ್ಮ ಕುಟುಂಬ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

ಶಾಸಕ ದಿನಕರ ಶೆಟ್ಟಿ, ವೈದ್ಯರಾದ ಡಾ. ಜಿ.ಜಿ ಹೆಗಡೆ ಹಾಗೂ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ವಿಭೂಷಣ ಹೆಗಡೆ,  ಹಿರಿಯ ವಕೀಲರಾದ ಆರ್.ಜಿ.ನಾಯ್ಕ,ನಾಗರಾಜ ನಾಯಕ, ಬಿಜೆಪಿಯ ಹೇಮಂತ ಕುಮಾರ ಗಾವಂಕರ, ಕುಮಾರ ಮಾರ್ಕಾಂಡೆ,  ವೆಂಕಟೇಶ್ ನಾಯಕ, ಹಾಗೂ ಇತರ ಪಕ್ಷಗಳ ಪ್ರಮುಖರು ಮತ್ತು ವಿದ್ಯಾವರ್ಧಕ ಸಂಘದ ಸದಸ್ಯರು ಅವರ ಅಂತಿಮ ದರ್ಶನ ಪಡೆದರು.

ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲೆಂದು ಅವರ ಹಿತೈಷಿಗಳು ಸ್ನೇಹಿತರು ಹಾಗೂ ಬಂಧುಗಳು ಪ್ರಾರ್ಥಿಸಿದ್ದಾರೆ.