ಕುಮಟಾ: ಉತ್ತರಕನ್ನಡ ಜಿಲ್ಲೆಗೆ ಅತ್ಯವಶ್ಯಕವಾದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ನಿರ್ಮಾಣದ ಬಗ್ಗೆ ಬೆಂಗಳೂರಿನಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್‌ರವರ ನೇತೃತ್ವದಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ಸಭೆ ನಡೆಸಿ, ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗೆ ಗ್ರೀನ್ ಸಿಗ್ನಲ್ ಪಡೆದಿದ್ದಾರೆ.
ಆಸ್ಪತ್ರೆಗೆ ತಾತ್ವಿಕ ಒಪ್ಪಿಗೆ ಸಿಗುತ್ತಿದಂತೆ ಚಟುವಟಿಕೆಗಳು ಗರಿಗೇದರಿದೆ.ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರು ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕುಮಟಾಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು, ಮಿರ್ಜಾನದ ಖೈರೆ, ಕುಮಟಾ ರೈಲ್ವೆ ಸ್ಪೇಷನ್ ಸಮೀಪದ ಜಾಗ, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಪಕ್ಕದ ಜಾಗವನ್ನು ವೀಕ್ಷಿಸಿದ್ದಾರೆ.
ಸ್ಥಳ ಪರಿಶೀಲನೆಯ ಬಳಿಗ ಕುಮಟಾ ಸಹಾಯಕ ಆಯುಕ್ತರ ಕಛೇರಿಯಲ್ಲಿ ಸಭೆ ನಡೆಸಿ, ಆಸ್ಪತ್ರೆಗೆ ಬೇಕಾಗುವ ಜಾಗದ ಕುರಿತು ಚರ್ಚಿಸಿದ್ದಾರೆ. ಆಸ್ಪತ್ರೆಗೆ ಯಾವ ಜಾಗ ಸೂಕ್ತ? ಕಾನೂನು ತೊಡಕುಗಳು ಏನಿವೆ? ಯಾವ ಪ್ರದೇಶದಲ್ಲಿ ಸುಲಭವಾಗಿ ಆಸ್ಪತ್ರೆ ನಿರ್ಮಾಣ ಮಾಡಬಹುದು ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚೆಯಾಗಿದೆ.
ಕುಮಟಾದಲ್ಲಿ ಸ್ಫಳ ಪರಿಶೀಲನೆಯ ನಂತರದಲ್ಲಿ ಸಾಧಕ-ಬಾಧಕಗಳ ಪಟ್ಟಿ ಸಹಿತ ಸ್ಥಳಗಳ ಬಗ್ಗೆ ಸ್ಥೂಲ ಮಾಹಿತಿಯನ್ನೊಳಗೊಂಡ ತಾತ್ಕಾಲಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿಗಳು ಅಧಿಕಾರಿಗಳೊಡನೆ, ಈ ಹಿಂದೆಯೂ ಸಹ, ತೆರಳಿ ಈ ಎಲ್ಲಾ ಪ್ರದೇಶಗಳ ಪರಿಶೀಲನೆ ನಡೆಸಿದ್ದರು. ಇದೀಗ ಪುನಃ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅತ್ತ , ಬೆಂಗಳೂರಿನಲ್ಲಿ ಸಚಿವ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆದ ಬೆನ್ನಲ್ಲೆ, ಚಟುವಟಿಕೆಗಳು ಗರಿಗೇದರಿದ್ದು, ಜಿಲ್ಲಾಧಿಕಾರಿಗಳು ದಿಢೀರ್ ಆಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜಾಗ ಪರಿಶೀಲನೆ ನಡೆಸಿದ್ದಾರೆ.