ಕುಮಟಾ: ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಗೋಕರ್ಣ ಅಭಿವೃದ್ದಿಗೆ ಕರ್ನಾಟಕ ಕರಾವಳಿ ಪ್ರದೇಶಗಳ ಅಭಿವೃದ್ದಿಗೆ ಪೂರಕವಾಗಿ ಸಿ.ಆರ್.ಜೆಡ್, ನಿಯಮಾವಳಿಗಳ ಸಡಲಿಕೆಗಾಗಿ ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪಿಸಿದಾಗ, ಕೂಡಲೇ ಸ್ಪಂದಿಸಿ, ನಿಯಮಾವಳಿಗಳ ಬದಲಾವಣೆಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕಾರ್ಯಗತರೂಪಿಸಲು ಒಪ್ಪಿ ಈಗ ಕೇಂಧ್ರ ಸರ್ಕಾರದ ಅನುಮತಿ ಪಡೆದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಎಂದು ಬಿಜೆಪಿಯ ಮುಖಂಡರಾದ ನಾಗರಾಜ ನಾಯಕ ತೋರ್ಕೆ ಹೇಳಿದರು.
ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಶಿವಮೊಗ್ಗದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪ್ರಮುಖರ ಸಭೆಯಲ್ಲಿ ಗಮನಕ್ಕೆ ತರಲಾಗಿದ್ದು ಅದಕ್ಕೆ ಅವರು ಒಪ್ಪಿ ಈಗ ಕೇಂದ್ರ ಸರಕಾರದ ಪಡೆದಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ದೇವಸ್ಥಾನ ಪ್ರವಾಸೋಧ್ಯಮ, ಪರಿಸರ ಪಾರಂಪರಿಕ, ಪ್ರವಾಸೋಧ್ಯಮ ಮೂಲಕ ಸಮಗ್ರವಾಗಿ ಅಭಿವೃದ್ದಿಯಾಗಬೇಕು ಎಂದು ಗಮನಕ್ಕೆ ತಂದಿರುವುದಾಗಿ ತಿಳಿಸಿದರು.