Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ತಾಲೂಕಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ

ಕುಮಟಾ:ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಗಡೆ ಹಾಗೂ ಕೆನರಾ ಕಾಲೇಜು ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಎ. ವಿ. ಬಾಳಿಗಾ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ತಾಲೂಕಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟವನ್ನು  ಶಾಸಕ ದಿನಕರ ಶೆಟ್ಟಿ  ಉದ್ಘಾಟಿಸಿ, ನಂತರ, ಮಾತನಾಡಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವಿದ್ಯಾಭ್ಯಾಸ ಎಷ್ಟುಮುಖ್ಯವೋ, ಪಠ್ಯೇತರ ಚಟುವಟಿಕೆಗಳು, ಕ್ರೀಡಾಕೂಟಗಳೂ ಅಷ್ಟೇಮುಖ್ಯ. ಕ್ರೀಡೆ ಎನ್ನುವುದು ವಿದ್ಯಾರ್ಥಿಗಳ ದೈಹಿಕ ಅರೋಗ್ಯಕ್ಕೆ ನೆರವಾಗುವುದಲ್ಲದೆ ಮಾನಸಿಕ ಸಮತೋಲನಕ್ಕೂ ಪೂರಕವಾದುದಾಗಿವೆ. ಇಂತಹ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆಯವರನ್ನು ಅಭಿನಂದಿಸುತ್ತೇನೆ. ಶೈಕ್ಷಣಿಕ ಚಟುವಟಿಕೆಗಳಿಗೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಸಾಧನೆಮಾಡುವಂತಾಗಲಿ ,ಎಲ್ಲಾ ಶಾಲೆಯ ದೈಹಿಕ ಶಿಕ್ಷಕರು ಸೇರಿ ಉತ್ತಮವಾದ ಸಂಘಟನೆಯನ್ನು ನೇರವೇರಿಸಿದ್ದಾರೆ. ಕುಮಟಾ ತಾಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಅವರ ನೇತೃತ್ವದಲ್ಲಿ ಉತ್ತಮವಾದ ಕ್ರೀಡಾ ಕೂಟವನ್ನು ಸಂಘಟನೆಯನ್ನು ಮಾಡಿರುವುದು ನಾವು ತುಂಬಾ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಅದರಲ್ಲಿ ಬಹುಮಾನ ಪಡೆದರೆ, ದೊಡ್ಡವರಾಗದ ಮೇಲು ಕೂಡಾ  ಬಾಲ್ಯದ ನೆನಪು ನೆನಪಿಸಲು ಯತ್ನಿಸುತ್ತೇವೆ. ಕ್ರೀಡಾ ಕೂಟ ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾದ ನೆನಪುಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದಷ್ಟು ಜೀವನದಲ್ಲಿ ಕಟುಸತ್ಯ, ಮತ್ತು ನೈಜತೆ ನೆನಪಾಗುತ್ತಾ ಹೋಗುತ್ತದೆ. ಶಿಕ್ಷಣ ಕಲಿಯುವಾಗ ವಿದ್ಯಾರ್ಥಿಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡಲು ತೊಡಗಿಕೊಂಡಾಗ ಕಲಿಕೆಯು ಸಾರ್ಥಕತೆಯಾಗುತ್ತದೆ ಎಂದು ಉದ್ಯಮಿ ಸುಬ್ರಾಯ ವಾಳ್ಕೆ ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯೆ  ಗೀತಾ ಮುಕ್ರಿ, ಹೆಗಡೆ ಪ್ರೌಢಶಾಲಾ ಪ್ರಾಂಶುಪಾಲರಾಗಿರುವ  ರಾಜು ಗಾಂವಕರ, ಕ್ಷೇತ್ರ ಸಮನ್ವಯಾಧಿಕಾರಿ   ರೇಖಾ ನಾಯ್ಕ, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿರುವ ಎಸ್. ಬಿ. ನಾಯ್ಕ, ಕ್ಷೇತ್ರಶಿಕ್ಷಣಾಧಿಕಾರಿ  ರಾಜೇಂದ್ರ ಎಲ್. ಭಟ್ ಉಪಸ್ಥಿತರಿದ್ದರು.