Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಹೊರಮಸಗಿ,‌ ಭೂ ಕುಸಿತದ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ

ಕುಮಟಾ: ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯ ಹೆಬೈಲ್‌ನ ಹೊರಮಸಗಿ ಸೇತುವೆ ಬಳ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ ನಿಕಟಪೂರ್ವ ಸದಸ್ಯರಾದ ಗಜಾನನ ಪೈ, ಪರಿಶೀಲನೆ ನಡೆಸಿದರು.

ಅಲ್ಲಿನ ಪರಿಸ್ಥಿತಿ ಬಗ್ಗೆ ಅಧಿವೇಶನದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರಿಗೆ ಕರೆ ಮಾಡಿ ಮಾಹತಿ ನೀಡಿದರು. ತಕ್ಷಣ ಸ್ವಂದಿಸಿದ ಶಾಸಕರು ಪಿಡಬ್ಲುಡಿ ಅಧಿಆಖರಿಗಳಿಗೆ ಸೂಕ್ತ ಕ್ರಮ ಕೈಗೋಳ್ಳುವಂತೆ ಸೂಚಿಸಿದರು. ಶಾಸಕದರ ಸೂಚನೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಿಡಬ್ಲುಡಿ ಅಧಿಕಾರಿಗಳಿಗೆ ಈ ರಸ್ತೆಯ ದುಸ್ಥಿತಿಯ ಬಗ್ಗೆ ಗಜಾನನ ಪೈ ತಿಳಿಸಿದರು. ಅಲ್ಲದೇ ತುರ್ತು ಕಾಮಗಾರಿ ನಡೆಸಿ ರಸ್ತೆ ಸರಿಪಡಿಸಿಕೊಡುವಂತೆ ಆಗ್ರಹಿಸಿದರು.  ಆ ಭಾಗದ ಜನರು ಸೇತುವೆ ಮುಂಭಾಗದ ೮೦೦ ಮೀಟರ್ ರಸ್ತೆಯನ್ನು ಸುಧಾರಣೆ ಮಾಡುವಂತೆ ಗಜಾನನ ಪೂ ಅವರ ಬಳಿ ಮನವಿ ಮಾಡಿದರು. ಈ ಬಗ್ಗೆ ಶಾಸಕರ ಗಮನ ಸೆಳೆದು ಅಗತ್ರಯ ಕ್ರಮ ಕೈಗೋಳ್ಳುವಂತೆ ಭರವಸೆ ನೀಡಿದರು. ಪಿಡಬ್ಲೂಡಿ ಇಂಜಿನಿಯರ ಸುದರ್ಶನ ಮಡಿವಾಳ, ಅಳಕೋಡ್ ಗ್ರಾ.ಪಂ ಸದಸ್ಯರಾದ ವಿನಾಯಕ ನಾಯ್ಕ ಹಾಗೂ ಗ್ರಾಮಸ್ಥರು ಇದ್ದರು.