Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಭಟ್ಕಳದಲ್ಲಿ ಅಕ್ರಮ ಕಟ್ಟಡಗಳನ್ನು ತೆರವಿಗೆ, ಶಾಸಕರಿಂದ 8 ದಿನ ಗಡುವು

ಭಟ್ಕಳ :ಕಳೆದ ಹಲವು ದಿನಗಳ ಹಿಂದಷ್ಟೇ ಶಾಸಕ ಸುನೀಲ ನಾಯ್ಕ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಆಸರಕೇರಿ ನಿಶ್ಚಿಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಮಹಾದ್ವಾರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಳಿಕ ಪುರಸಭೆ ವ್ಯಾಪ್ತಿಯ ವಿ.ಟಿ ರೋಡ್ ವೆಂಕಟರಮಣ ದೇವಸ್ಥಾನ ನಮೀಪದ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣ ಕಾಮಗಾರಿಯು ಪ್ರಾರಂಭವಾಗಿತ್ತು. 

ಆದರೆ ಮಹಾದ್ವಾರ ನಿರ್ಮಾಣ ಅನ್ಯ  ಕೋಮಿನ ಜನರು ತಕರಾರು ತೆಗೆದಿದ್ದಾರೆ. ಇದಕ್ಕೆ ವಿರುದ್ಧವಾಗಿ ಗುರುವಾರ ಮಧ್ಯಾಹ್ನ ವೇಳೆಗೆ ಹಳೆ ಬಸ್ ನಿಲ್ದಾಣದ ಸುಲ್ತಾನ್ ಸ್ಟ್ರೀಟ್ ಮಾರ್ಗ ಮಧ್ಯೆ ಟಿಪ್ಪು ಸುಲ್ತಾನ್ ಗೇಟ್ ನಿರ್ಮಿಸಲು ಇನ್ನೊಂದು ಕೋಮಿನ ಜನರು ಶುಕ್ರವಾರ ಸಂಜೆ 5 ಗಂಟೆಗೆ ಹಜ್ರತ್ ಟಿಪ್ಪು ಸುಲ್ತಾನ್ ಗೇಟ್ ಕಾಮಗಾರಿಗೆ ಚಾಲನೆ ನೀಡುವ ಪ್ಲೆಕ್ಸ್ ಹಾಕಿ ಸ್ಥಳದ ಗುರುತು ಮಾಡಿದ್ದರು.ನಂತರ ಪೋಲಿಸರು ಮತ್ತು ಅಧಿಕಾರಿಗಳು ಅದನ್ನು ತೆರವುಗೊಳಿದಿದರು. ಶನಿವಾರ ಬೆಳಿಗ್ಗೆ ಶಾಸಕ ಸುನೀಲ್  ನಾಯ್ಕ ಅವರು ತಾವು ತನ್ನ ಸ್ವಂತ ವೆಚ್ಚದಲ್ಲಿ ನಿರ್ಮಿಸುತ್ತಿರುವ  ಆಸರಕೇರಿ ವೆಂಕಟ್ರಮಣ ದೇವಸ್ಥಾನದ  ಮಹಾದ್ವಾರದ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುನೀಲ್ ನಾಯ್ಕ ಭಟ್ಕಳದ ಪುರಸಭೆಯ ವ್ಯಾಪ್ತಿಯಲ್ಲಿ ಅನೇಕ ಅಕ್ರಮ ಕಟ್ಟಡಗಳು ಇದೆ. ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ತಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಒಂದೊಮ್ಮೆ ಉತ್ತರ ಕನ್ನಡ ಜಿಲ್ಲಾಡಳಿತ 8 ದಿನಗಳ ಒಳಗೆ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಈರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸದಿದ್ದಲ್ಲಿ ,ಭಟ್ಕಳದಲ್ಲಿ  ಮುಂದೆ ನಡೆಯುವ ಅನಾಹುತಗಳಿಗೆ ಮತ್ತೆ ಆಗುಹೋಗುಗಳಿಗೆ  ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ತಿಳಿಸಿದರು.

ಆಸರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಮಹಾದ್ವಾರದ ಕೆಲಸವನ್ನು ನಾವು ತಾತ್ಕಾಲಿಕವಾಗಿ 8 ದಿನಗಳವರೆಗೆ ನಿಲ್ಲಿಸಿದ್ದು, 8 ದಿನಗಳ ನಂತರ ಸ್ವತಃ ನಾನೆ ಮುಂದೆ ನಿಂತು ದೇವಸ್ಥಾನದ ಮಹಾದ್ವಾರದ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ , ವಕೀಲ ರಾಜೇಶ್ ನಾಯ್ಕ , ವಕೀಲ ಮಾಸ್ತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.