ಕುಮಟಾ: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯು ಸಪ್ಟೆಂಬರ್ 10ರಂದು ತಾಲೂಕಿನ ನಾಮಧಾರಿ ಸಭಾಭವನದಲ್ಲಿ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಮಟ್ಟಣದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.ನಾಮಧಾರಿ ಸಭಾಭವನದಿಂದ ಪ್ರಾರಂಭವಾದ ರ‍್ಯಾಲಿಯು ಕುಮಟಾ ಪಟ್ಟಣದ ಪ್ರಮುಖ ಮಾರುಕಟ್ಟೆಯ ಪ್ರದೇಶದಲ್ಲಿ ಸಂಚರಿಸಿತು. ನಾರಾಯಣ ಗುರುಗಳ ಗೀತೆಯ ಜೋತೆಗೆ, ಗುರುಗಳ ಭಾವ ಚಿತ್ರವಿರುವ ವಾಹನಗಳ ಮೆರವಣಿಗೆ ಗಮನ ಸೆಳೆಯಿತು.
ಬೃಹ್ಮಶ್ರೀ ಶ್ರೀ ನಾರಾಯಣ ಗುರುಗಳು ಹಿಂದೂಳಿದ ಸಮಾಜದ ಶ್ರೇಯೋಭಿವೃದ್ದಿಗೆ, ಶ್ರಮಿಸುವ ಮೂಲಕ ಅನೇಕ ಕ್ರಾಂತಿಕಾರಿ ಬದಲಾವಣೆಗೆ ತಂದಿದ್ದಾರೆ. ಮನುಕುಲ ಕಲ್ಯಾಣಕ್ಕಾಗಿ ಶ್ರಮಿಸಿದ ಗುರುಗಳ ಜಯಂತಿಯನ್ನು ನಾವೆಲ್ಲಾ ಆಚರಣೆ ಮಾಡಬೇಕು ಈ ನಿಟ್ಟಿನಲ್ಲಿ ಗುರುಗಳ ಅನುಯಾಯಿಗಳು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಗುರುಗಳ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎಂದು ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಆರ್ಯ ಈಡಿಗ ನಾಮಧಾರಿ ಸಂಘ ಹಾಗೂ ಸರಕಾರೇತರ ಸಹಯೋಗದೊಂದಿಗೆ ಬೃಹ್ಮಶ್ರೀ ಶ್ರೀ ನಾರಾಯಣ ಗುರುಗಳ ಜಯಂತಿಯು ಸಪ್ಟೆಂಬರ್ 10 ರಂದು ನಡೆಯಲಿದ್ದು ಕುಮಟಾ ಪಟ್ಟಣದಲ್ಲಿ ಬೈಕ್ ರ‍್ಯಾಲಿ ಏರ್ಪಡಿಸಿದ್ದೇವೆ. ತತ್ವ ಜ್ಞಾನಿಗಳಾಧ ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ಸಮಾಜಕ್ಕೆ ಬಿತ್ತುವ ಅವಶ್ಯಕತೆ ಇದೆ ಉಪನ್ಯಾಸಕರಾದ ಪ್ರಮೋದ ನಾಯ್ಕ ಹೇಳಿದರು.
ಈ ಸಂಧರ್ಭದಲ್ಲಿ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್ ನಾಯ್ಕ, ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ, ಕರವೇ ಜಿಲ್ಲಾಧ್ಯಕ್ಷ ಬಾಸ್ಕರ ಪಟಗಾರ, ಕಸಾಪ ಮಾಜಿ ಅಧ್ಯಕ್ಷ ಶ್ರೀಧರ ಗೌಡ ಉಪ್ಪಿನ ಗಣಪತಿ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೊಡ್ಕಣಿ, ಮೀನುಗಾರರ ಮುಖಂಡ ಜೈ ವಿಠಲ್ ಕುಬಾಲ್, ಕೂಜಳ್ಳಿ ಗ್ರಾ.ಪಂ ಸದಸ್ಯ ವೈಭವ ನಾಯ್ಕ, ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಇತರಿದ್ದರು.