ಕುಮಟಾ: ತಾಲೂಕಿನ ವೆಂಕಟೇಶ ಪ್ರಭು, ಪವರ್ ಲಿಫ್ಟಿಂಗ ಸ್ವರ್ದೆಯಲ್ಲಿ 93 ಕೆ.ಜಿ ವಿಭಾಗದಲ್ಲಿ ಬಂಗಾರದ ಪದಕವನ್ನು ಪಡೆದು ಇವರು ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟರ್ ಸ್ವರ್ದೆಗೆ ನಮ್ಮ ದೇಶವನ್ನು ಪ್ರತಿನಿಧಿಸಲು ತೆರಳುತ್ತಿದ್ದು, ಇವರಿಗೆ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಜಿ.ಪಂ ನಿಕಟಪೂರ್ವ ಸದಸ್ಯರಾದ ಗಜಾನನ ಪೈ ಅವರು ಕೆಡಿಸಿಸಿ ಬ್ಯಾಂಕ ವತಿಯಿಂದ 50 ಸಾವಿರ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದರು.
ಶಿಕ್ಷಣ ಮತ್ತು ಕ್ರೀಡೆಗೆ ಪ್ರೋತ್ಸಾಹಿಸಿ ಬೆಂಬಲಿಸಿದರೆ ಸಮಾಜವೂ ಉತ್ತಮ ರೀತಿಯಲ್ಲಿ ರೂಪಗೋಳ್ಳಲು ಸಹಕಾರಿಯಾಗುತ್ತದೆ, ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟರ್ ಸ್ವರ್ದೆಯಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿಯನ್ನು ತರಬೇಕು ಎಂದು ಜಿ.ಪಂ ನಿಕಟಪೂರ್ವ ಸದಸ್ಯರಾದ ಗಜಾನನ ಪೈ ಶುಭಹಾರೈಸಿದರು.