Header Ads Widget

Koojalli times ನಲ್ಲಿ ಪ್ರಸಾರವಾಗುವ ವಿವಿಧ ಬಗೆಯ ಕಾರ್ಯಕ್ರಮಗಳನ್ನು ವಿಕ್ಷೀಸಲು ನಮ್ಮ (facebook page), (youtube channel), (instagram), (twitter page) ಗಳನ್ನು follow ಮಾಡಿ

ಬಿಜೆಪಿಯು ಧರ್ಮ, ಜಾತಿಗಳ ವಿಭಜನೆಯಿಂದ ಮತಗಳಿಸಲು ಯತ್ನಿಸುತ್ತಿದೆ : ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ

ಶಿರಸಿ: ಬಿಜೆಪಿಯ ರೈತ ವಿರೋಧಿ ನೀತಿಯಿಂದ ಮತ್ತು ಅಪ್ರಬುಧ್ದ ಆಡಳಿತದಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಉತ್ತರಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಹರಿಹಾಯ್ದರು. ಅವರು ಶಿರಸಿಯ  ವಿನಾಯಕ ಸಭಾಂಗಣದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. 


ಅವರು ಬಿಜೆಪಿಯ ಬೇಜವಾಬ್ದಾರಿ ಆಡಳಿತದಿಂದಾಗಿ ರೈತ ಸಮುದಾಯ ಸಾಕಷ್ಟು ಕಷ್ಟ ಅನುಭವಿಸುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ತುಂಬಾ ಹೆಚ್ಚಳವಾಗಿದೆ, ಪೆಟ್ರೋಲ್ ಡಿಸೆಲ್ ಬೆಲೆ ದಿನ ನಿತ್ಯ ಏರುತ್ತಿದ್ದು ಅವಶ್ಯಕ ಸಾಮಗ್ರಿಗಳ ಸಾಗಾಟವೂ ಕಷ್ಟದಾಯಕವಾಗಿದೆ. ಯಾವುದೇ ಜನಪರ ಯೋಜನೆಗಳನ್ನು ನೀಡದ ಬಿಜೆಪಿ ಸರ್ಕಾರಗಳು ಕೇವಲ ಧರ್ಮ ಜಾತಿಗಳ ವಿಭಜನೆಯಿಂದ ಮತಗಳಿಸಲು ಯತ್ನಿಸುತ್ತಿದೆ ಎಂದರು.
ಉತ್ತರಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಂಘಟನೆಯನ್ನು ಬಲಗೊಳಿಸಲು ತೀರ್ಮಾನಿಸಿದ್ದು ಬ್ಲಾಕ್ ಘಟಕ ಸಮಿತಿಗಳನ್ನು ರಚಿಸಲಾಗುತ್ತಿದೆ, ಪ್ರತಿ ಗ್ರಾಮ ಪಂಚಾಯತ ಮತ್ತು ಬೂತ್ ಸಮಿತಿಗಳನ್ನು ರಚಿಸಿ ಬರಲಿರುವ ಚುನಾವಣೆಗೆ ಕಿಸಾನ್ ಘಟಕವನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಲಾಗುವುದೆಂದು ತಿಳಿಸಿದರು. ಪ್ರತಿ ಬ್ಲಾಕ್ ಕಿಸಾನ್ ಘಟಕಗಳಿಗೆ ಜಿಲ್ಲಾ ಸಮಿತಿಯಿಂದ ವೀಕ್ಷಕರುಗಳನ್ನು ನೇಮಿಸಲಾಗುತ್ತಿದೆ ಎಂದರು.

ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪಾದ್ ಹೆಗಡೆ ಕಡವೆ ಮಾತನಾಡಿ ರೈತರಲ್ಲಿ ತ್ಯಾಗ ಮನೋಭಾವನೆ ಇದೆ ರೈತರು ಎದ್ದು ನಿಂತರೆ ಕ್ರಾಂತಿಯೇ ಆಗುತ್ತದೆ ಅದಕ್ಕಾಗಿ ಬಿಜೆಪಿ ರೈತರ ಬಲ ಕುಂದಿಸಲು ಹೊರಟಿದೆ ಆದ್ದರಿಂದ ಹಿರಿಯ ಕ್ರಿಯಾಶೀಲ ರೈತರುಗಳನ್ನು ಕಿಸಾನ್ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಕು ಎಂದರು. ರೈತರಿಗೆ ಕಿಸಾನ್ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತದೆ ಎಂದರು. ಕಿಸಾನ್ ಘಟಕಗಳಲ್ಲಿ ಸಂಖ್ಯೆಯೊಂದಿಗೆ ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು ಎಂದರು.


ಸಬೆಯಲ್ಲಿ ಜಿಲ್ಲಾ ಕಿಸಾನ್ ಉಪಾಧ್ಯಕ್ಷ ಮನೋಹರ ಗೌಡ, ಮುಂಡಗೋಡ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಪ್ರದೀಪ್ ಗೌಡ, ಕಿಸಾನ್ ಬ್ಲಾಕ್ ಕುಮಟಾದ ಅಧ್ಯಕ್ಷರಾದ ಗಿರೀಶ ಪಟಗಾರ ಹೆಗಡೆ, ಭಟ್ಕಳ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಎನ್.ಜೆ. ನಾಯ್ಕ, ಪಾಂಡುರಂಗ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ಕರ್ಕಿ, ಶ್ರೀಧರ ಹೆಗಡೆ ಶಿರಸಿ, ಗಜಾನನ ನಾಯ್ಕ ಸಾಲ್ಕೋಡ್, ನಾಗೇಶ್ ನಾಯ್ಕ ಅರೆಅಂಗಡಿ,  ರಾಮಕೃಷ್ಣ ಶೆಟ್ಟಿ ಕೆರೆಕೋಣ, ಗಜಾನನ ಮೊರಬಾ, ಸುರೇಶ ಮೇಸ್ತ ಕರ್ಕಿ, ಕೆ.ಜೆ.ನಾಯ್ಕ ಭಟ್ಕಳ, ಹರೀಶ ಭಟ್ಟ್ ಕಲ್ಲಬ್ಬೆ, ನವೀನ್ ನಾಯ್ಕ ಹಳೀದಿಪುರ, ಶಂಶೀರ್‌ಖಾನ್ ಹಳದೀಪುರ, ವಾಮನ್ ಪಟಗಾರ ಬರ್ಗಿ, ಬಾಬು ನಾಯ್ಕ ಬಳಕೂರು ಮುಂತಾದ ಇದ್ದರು.