ಕುಮಟಾ: ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಮಹಿಳೆಯರಿಗೆ ಸಂಭಂಧಿಸಿದ ಕಾನೂನುಗಳ ಕುರಿತು ಕಾನೂನು ಸಾಕ್ಷಾರತಾ ಕಾರ್ಯಕ್ರಮ ಪಟ್ಟಣದ ತಾ.ಪಂ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೊಯ್ಲಿನ್ ವೆಂಡೂನ್ಸಾ ಉದ್ಘಾಟಿಸಿ ಮಾತನಾಡಿ ದೇಶದ ಅಭಿವೃದ್ದಿಗೆ ಅಪೌಷ್ಠಿಕತೆಯು ದೊಡ್ಡ ಸವಾಲಾಗಿದೆ. ಅದರ ವಿರುದ್ದ ಹೋರಾಟದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು, ಇದು ಸರಕಾರದ ಕರ್ತವ್ಯ ಮಾತ್ರವಲ್ಲ ನಮ್ಮೆಲ್ಲರ ಆಧ್ಯತೆಯಾಗಿರಬೇಕು. ಆರೋಗ್ಯವಂತ ಮನುಷ್ಯರು ನೀಜವಾದ ಶ್ರೀಮಂತರು ಎಂದು ಅಭಿಪ್ರಾಯಪಟ್ಟರು.
ಮಹಿಳೆ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ವಕೀಲರಾದ ಮಮತಾ ನಾಯ್ಕ ಮಾತನಾಡಿ, ವೈದ್ಯಕೀಯ, ರಕ್ಷಣಾ ಕ್ಷೇತ್ರ ಮಾತ್ರವಲ್ಲದೇ ಇತರ ರಂಗದಲ್ಲೂ ಮಹಿಳೆಯರು ಉತ್ತಮವಾಗಿ ಸಾಧನೆ ಮಾಡುತ್ತಿದ್ದು, ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳು ಜಾರಿಯಲ್ಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಆರ್.ಜಿ.ನಾಯ್ಕ, ತಾಲೂಕಾ ಆಡಳಿತಾಧಿಕಾರಿಯಾದ ಎನ್.ಜಿ.ನಾಯಕ, ತಾ.ಪಂ ಕಾರ್ಯನಿರ್ವಹಣಾಧಿಕಾರಿಯಾದ ನಾಗರತ್ನಾ ನಾಯಕ, ಪುರಸಭಾ ಮುಖ್ಯಾಧಿಕಾರಿ, ಅಜಯ ಭಂಡಾರಕರ್ ಇತರರಿದ್ದರು.