ಕುಮಟಾ: ತಾಲೂಕ ಮಟ್ಟದ ಪ್ರೌಢ ಶಾಲೆಗಳ ಇಲಾಖೆ ಕ್ರೀಡಾಕೂಟದಲ್ಲಿ ಹೆಗಡೆಯ ಶ್ರೀ ಶಾಂತಿಕಾಂಬಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ನರೇಂದ್ರ ಜಟ್ಟು ಗೌಡ ೩೦೦೦ ಮೀಟರ ಪ್ರಥಮ. ನಿಖಿಲ ಶೇಖರ ಪಟಗಾರ ೧೫೦೦ ಮೀಟರ ಓಟ ಪ್ರಥಮ, ಚಂದ್ರಶೇಖರ ಶಂಕರ ಗೌಡ ೮೦೦ ಮೀಟರ ಓಟ ದ್ವಿತೀಯ ಹರ್ಡಲ್ಸ್ ದ್ವಿತೀಯ. ಜೀವಿತಾ ಪ್ರಕಾಶ ನಾಯ್ಕ ಯೋಗ ಪ್ರಥಮ, ಭಾಗ್ಯ ವಿನಾಯಕ ಮಡಿವಾಳ ೮೦೦ ಮೀಟರ ಓಟ ದ್ವಿತೀಯ. ಅರ್ಚನಾ ಈಶ್ವರ ಗೌಡ ಹರ್ಡಲ್ಸ್ ದ್ವಿತೀಯ, ರಕ್ಷಾ ಶ್ರೀನಿವಾಸ ಗುನಗಾ ೨೦೦ ಮೀಟರ ಓಟ ತೃತೀಯ, ಉದ್ದ ಜಿಗಿತ ತೃತೀಯ ಮೈತ್ರಿ ವೆಂಕಟೇಶ ನಾಯ್ಕ ಹರ್ಡಲ್ಸ್ ತೃತೀಯ ಬಾಲಕರ ೪x೧೦೦ ರಿಲೆ ದ್ವಿತೀಯ. ಬಾಲಕರ ಖೋ ಖೋ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಕುಮಟಾ ಅರ್ಬನ ಬ್ಯಾಂಕ್ ಅಧ್ಯಕ್ಷರಾದ ದೀರು ಶಾನಭಾಗ ಮಾತನಾಡಿ, ಈ ವರ್ಷ ನಮ್ಮ ಹೆಗಡೆ ಶಾಂತಿಕಾಂಬ ಪೌಢಶಾಲಾ ವಿದ್ಯಾರ್ಥಿಗಳು ಕೋ, ಕೋ ದಲ್ಲಿ ತಾಲೂಕಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲಾ ಮಟ್ಟಕ್ಕೆ ಇದು ನಮ್ಮ ಊರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿದಿನವೂ ಕೂಡಾ ಕ್ರೀಡೆಯಲ್ಲಿ ಉತ್ತಮವಾದ ಪ್ರಯತ್ನ ಮಾಡಿರುವುದರಿಂದ ತಾಲೂಕಾಮಟ್ಟದಲ್ಲಿ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ಹೋಗಲು ಸಹಾಯಕವಾಗಿದೆ. ಇದಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ಧೈಹಿಕ ಶಿಕ್ಷಕರಾದ ಎಂ,ಎಸ್ ದೊಡ್ಮನೆ ಹೇಳಿದರು.
ಮುಖ್ಯಾಧ್ಯಾಪಕರು ವೀಣಾ ಸಿ.ಕುರ್ಸಿ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ತರಬೇತಿ ನೀಡಿದ ಧೈಹಿಕ ಶಿಕ್ಷಕರಾದ ಎಂ,ಎಸ್ ದೊಡ್ಮನೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕರಾದ ಎನ್.ವಿ.ನಾಯ್ಕ, ಸಂಜೇಯ ಎನ್ ಶಾನಭಾಗ, ನಾಗರಾಜ್ ಪೈ, ದೀಪಕ ಗಾವಡಿ, ಸವೀತಾ ನಾಯ್ಕ, ರೇಷ್ಮಾ ನಾಯ್ಕ, ಗಾಯತ್ರಿ ಶಾನಭಾಗ, ಎಸ್ ಇ ಕಮಿಟಿಯ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗದವರು, ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.