ಕಾರವಾರ: ಕುಮಟಾ ತಾಲೂಕಿನ ವಿಜಯಶಾಲಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀಯುತ ಸದಾನಂದ ದೇಶಭಂಡಾರಿಯವರನ್ನು "ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ"ಸಂಘಟನೆಯ ಉತ್ತರಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನರವರು ನೇಮಿಸಿದ್ದಾರೆ.
ಸದಾನಂದ ದೇಶಭಂಡಾರಿಯವರು ಕಳೆದ ಹಲವಾರು
ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಪತ್ರಕರ್ತರಾಗಿ
ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯವಾಣಿ,
ಕನ್ನಡಪ್ರಭ ಸೇರಿದಂತೆ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ.
ವಿಜಯವಾಣಿಯಲ್ಲಿ ಪ್ರಕಟವಾದ ಕತಗಾಲ-ಬೊಗರಿಬೈಲ್ ಹಾಗೂ ಐಗಳಕೂರ್ವೆ ಸೇತುವೆಯ ಅವರ ವರದಿಯ ಫಲಶ್ರುತಿಯಾಗಿ ಸೇತುವೆ ನಿರ್ಮಾಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಳೆದ ಆರು ವರ್ಷಗಳಿಂದ ತಮ್ಮದೇ
ಸ್ವಂತ “ವಿಜಯಶಾಲಿ” ವರ್ಣರಂಜಿತ ವಾರ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು, ಅವರ ಪರಿಣಾಮಕಾರಿ ವರದಿಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಎಂಟು ತಿಂಗಳ ಹಿಂದೆ "ಕುಮಟಾ ಕನ್ನಡ ಸಂಘ” ವನ್ನು ಸ್ಥಾಪಿಸಿ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು
ಸಂಘಟಿಸುವ ಮೂಲಕ ಕನ್ನಡಿಗರ ಮನಮುಟ್ಟುವಲ್ಲಿ
ಸಫಲರಾಗಿದ್ದಾರೆ. ಇವರ ಅಮೂಲಾಗ್ರ ಸಂಘಟನಾತ್ಮಕ ಸೇವೆಯನ್ನು ಗಮನಿಸಿ “ಕರ್ನಾಟಕ ವರ್ಕಿಂಗ್ ಜರ್ನಲಿಸ್ಟ್ ವಾಯ್ಸ್ಸಸಂಘಟನೆಯ ಜಿಲ್ಲಾಧ್ಯಕ್ಷರನ್ನಾಗಿ, ರಾಜ್ಯಾಧ್ಯಕ್ಷರಾದ
ಬಂಗ್ಲೆ ಮಲ್ಲಿಕಾರ್ಜುನರವರು ನೇಮಕಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಪತ್ರಕರ್ತರರನ್ನು ಸಂಘಟಿಸುವುದರ ಜೊತೆಯಲ್ಲಿ ಅವರ ಮೂಲಭೂತ ಹಕ್ಕುಗಳು ಹಾಗೂ
ಅವರು ಕಾರ್ಯ ನಿರ್ವಹಿಸುವಾಗ ಎದುರಾಗುವ
ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಸೂಚಿಸಿದ್ದಾರೆ.